ಪ್ರಮುಖ ಸುದ್ದಿಮೈಸೂರು

ನಾಲೆಗಳಿಗೆ ನೀರು ಹರಿಸಿ: ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಆಗ್ರಹ

ಕಬಿನಿ, ನುಗು, ಹಾರಂಗಿ, ಕರಡಿ ಲಕ್ಕನಕೆರೆ, ವರುಣಾ ಹಾಗೂ ತಾಋಕ ಕಾಲುವೆಗಳ ಮೂಲಕ ಅಚ್ಚುಕಟ್ಟಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಸಾರ್ವಜನಿಕ ಉದ್ದೇಶಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ನೀಡುವಂತೆಯೂ ಕೂಡ ಆಗ್ರಹಿಸಿದರು.

ಅಂತರ್ಜಲವನ್ನು ಹೆಚ್ಚಿಸಲು ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಕಬ್ಬಿಗೆ ಟನ್‍ಗೆ 3 ಸಾವಿರ ರು. ಮುಂಗಡ ಹಣ ನಿಗದಿ ಮಾಡಬೇಕು. ಬರ ನಿರ್ಮೂಲನೆ ಮಾಡಲು ಸಮಾರೋಪಾದಿಯಲ್ಲಿ ಕಾರ್ಯಕ್ರಮ ರೂಪಿಸಬೇಕು. ಎಚ್‍.ಡಿ. ಕೋಡಿ ತಾಲೂಕು, ಹಂಪಾಪುರ ಹೋಬಳಿ, ಮಲಾರದ ಹುಂಡಿ, ಕಂಚಮಳ್ಳಿ, ಮಾರ್ಚಹಳ್ಳಿ, ಹಿರೇನಂದಿ, ಕಾರೇಹುಂಡಿ ಗ್ರಾಮಗಳ ರೈತರ ಜಮೀನನ್ನು ವರುಣಾ ನಾಲೆಗಾಗಿ ಸ್ವಾಧೀನಪಡಿಸಿಕೊಂಡು 15 ವರ್ಷಗಳಾದರೂ ಇದುವರೆಗೆ ಪರಿಹಾರ ನೀಡಿಲ್ಲ. ಕೂಡಲೇ ರೈತರಿಗೆ ನೀಡಬೇಕೆಂದು ಪ್ರತಿಭಟನಾಕಾರರು ಸರಕಾರವನ್ನು ಒತ್ತಾಯಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಕೆ.ಎಂ. ಪುಟ್ಟಸ್ವಾಮಿ, ಎಂ.ಎಸ್. ಅಶ್ವಥ್ ನಾರಾಯಣ ರಾಜೇ ಅರಸ್, ಸರಗೂರು ನಟರಾಜ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Leave a Reply

comments

Related Articles

error: