ಪ್ರಮುಖ ಸುದ್ದಿ

ಹಾಸನದ ಭಾನು ಚಿತ್ರಮಂದಿರಕ್ಕೆ ಸೃಜನ್ ಲೋಕೇಶ್ ಭೇಟಿ 

ಪ್ರಮುಖ ಸುದ್ದಿ, ಹಾಸನ, ಸೆ.೮: ರಾಜ್ಯದೆಲ್ಲೆಡೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕನ್ನಡ ಚಲನಚಿತ್ರ ಹ್ಯಾಪಿಜರ್ನಿ ನಾಯಕ ನಟ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ನಗರದ ಬಿ.ಎಂ ರಸ್ತೆಯಲ್ಲಿರುವ ಭಾನು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರವೀಕ್ಷಣೆ ಮಾಡಿದರು.

ತನ್ನ ನೆಚ್ಚಿನ ನಾಯಕ ಚಿತ್ರಮಂದಿರಕ್ಕೆ ಆಗಮಿಸಿದ ವೇಳೆ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಸೃಜನ್, ನನ್ನ ಚಿತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ದೊರೆತಿರುವುದು ಖುಷಿ ತಂದಿದೆ. ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಲೆಕ್ಷನ್ ಸಹ ಉತ್ತಮವಾಗಿದೆ ಎಂದು ಹೇಳಿದರು.

ಇದೆ ವೇಳೆ ಹಾಸ್ಯ ನಟ ವಿಶ್ವನಾಥ್ ಇತರರು ಕೂಡ ಆಗಮಿಸಿ ಕೆಲ ಸಮಯ ಚಲನಚಿತ್ರ ವೀಕ್ಷಣೆ ಮಾಡಿದರು.(ವರದಿ ಬಿ.ಎಂ)

 

Leave a Reply

comments

Related Articles

error: