ವಿದೇಶ

‘ಇರ್ಮಾ’ ಚಂಡಮಾರುತಕ್ಕೆ 17 ಮಂದಿ ಬಲಿ

ವಿದೇಶ,(ಹೈಟಿ),ಸೆ.9: ಕೆರೆಬಿಯನ್ ದ್ವೀಪಗಳನ್ನು ಅಪ್ಪಳಿಸಿರುವ ಇರ್ಮಾ ಚಂಡಮಾರುತಕ್ಕೆ ಸುಮಾರು 17 ಮಂದಿ ಬಲಿಯಾಗಿದ್ದಾರೆ ಎಂದು ಶುಕ್ರವಾರ ವರದಿಯಾಗಿದೆ. ಜತೆಗೆ ಅಪಾರ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ದ್ವೀಪ ಸಮೂಹದ ಹಲವಾರು ಮನೆಗಳು ಹಾನಿಗೀಡಾಗಿವೆ.

ಅಮೆರಿಕದ ಫ್ಲೋರಿಡಾದಲ್ಲಿ ಈ ಚಂಡಮಾರುತ ಸಾಕಷ್ಟು ಹಾನಿ ಮಾಡುವ ಸಂಭವವಿರುವುದರಿಂದ ಫ್ಲೋರಿಡಾ ಕರಾವಳಿ ಹಾಗೂ ನೆರೆಯ ಜಾರ್ಜಿ ಜಾರ್ಜಿಯಾದಿಂದ ಸುಮಾರು 10 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. “ಈ ಚಂಡಮಾರುವ ಅತ್ಯಂತ ವಿನಾಶಕಾರಿ. ಅಮೇರಿಕಾದ ಇಡೀ ಆಗ್ನೇಯ ಭಾಗದ ಜನ ತಕ್ಷಣವೇ ಎಚ್ಚೆತ್ತುಕಕೊಂಡು ಅಗತ್ಯ ಕ್ರಮ ಕೈಗೊಳ್ಳುವುದು ಒಳಿತು” ಎಂದು ಅಮೆರಿಕ ಫೆಡರಲ್ ತುರ್ತು ಪರಿಸ್ಥಿತಿ ನಿರ್ವಹಣ ಸಂಸ್ಥೆಯ ಮುಖ್ಯಸ್ಥ ಬ್ರೋಕ್ ಲಾಂಗ್ ಎಚ್ಚರಿಸಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: