ಮೈಸೂರು

ಬಿಎಸ್‍ವೈಗೆ ಕ್ಲೀನ್‍ಚಿಟ್: ಬಿಜೆಪಿ ಸಂಭ್ರಮಾಚರಣೆ

40 ಕೋಟಿ ರು. ಕಿಕ್‍ ಬ್ಯಾಕ್‍ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲಿದ್ದ ಪ್ರಕರಣ ಖುಲಾಸೆ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನ ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದ ಬಳಿ ಮಾಜಿ ಸಚಿವ ಎಸ್‍.ಎ. ರಾಮದಾಸ್ ಮತ್ತು ಬಿಜೆಪಿ ಕಾರ್ಯಕರ್ತರು ನೂರೊಂದು ತೆಂಗಿನಕಾಯಿ ಒಡೆದರು.

ಬುಧವಾರದಂದು ಸಿಬಿಐ ವಿಶೇಷ ನ್ಯಾಯಾಲಯ 40 ಕೋಟಿ ರು. ಕಿಕ್‍ ಬ್ಯಾಕ್‍ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಕ್ಲೀನ್‍ಚಿಟ್‍ ನೀಡಿತ್ತು. ಇದರಿಂದಾಗಿ ಯಡಿಯೂರಪ್ಪ ಅವರು ಎಲ್ಲ ಆರೋಪಗಳಿಂದಲೂ ಮುಕ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ರಾಮದಾಸ್ ಮೈಸೂರಿನಲ್ಲಿ ಸಂಭ್ರಮಾಚರಿಸಿದರು.

Leave a Reply

comments

Related Articles

error: