ಮೈಸೂರು

ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು

ಮೈಸೂರು, ಸೆ.೯: ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದ ನಿರ್ಮಿತಿ ಕೇಂದ್ರದ ಬಳಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಸೌತನಹಳ್ಳಿ ನಿವಾಸಿ ನಂಜುಂಡ (೨೫)ಮೃತ ದುರ್ದೈವಿ. ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: