ಮೈಸೂರು

ಸೆ.11ರಿಂದ 28ರವರೆಗೆ ಬಿ.ವಿ.ಕಾರಂತರ ಕಾಲೇಜು ರಂಗೋತ್ಸವ: ಭಾಗೀರಥಿ ಬಾಯಿ ಕದಂ

ಮೈಸೂರು, ಸೆ.೯: ಸೆ.11ರಿಂದ 28ರವರೆಗೆ ರಂಗಾಯಣದಲ್ಲಿ ಬಿ.ವಿ.ಕಾರಂತರ ಕಾಲೇಜು ರಂಗೋತ್ಸವ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದರು.
ಶನಿವಾರ ರಂಗಾಯಣದ ಲಂಕೇಶ್ ಗ್ಯಾಲರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣದಲ್ಲಿ ಪತ್ರಿ ವರ್ಷದಂತೆ ಈ ವರ್ಷವೂ ಬಿ.ವಿ.ಕಾರಂತರ ಕಾಲೇಜು ರಂಗೋತ್ಸವವನ್ನು ಮೈಸೂರು, ಹುಣಸೂರು, ತಿ.ನರಸೀಪುರ ಸೇರಿದಂತೆ 15 ಕಾಲೇಜುಗಳಲ್ಲಿ ಆ.8ರಿಂದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ನಡೆಸಲಾಗಿದ್ದು ಈ ಶಿಬಿರದಲ್ಲಿ ಸುಮಾರು ೫೦೦ ಜನ ಯುವ ಕಲಾವಿದರು ತಮ್ಮ ಕಾಲೇಜಿನಲ್ಲಿ ರಂಗಾಯಣದ ನಡೆಸಿದ ಒಂದು ತಿಂಗಳ ರಂಗ ತರಬೇತಿ ಶಬಿರದಲ್ಲಿ ಭಾಗವಹಿಸಿ ಸಿದ್ಧಪಡಿಸಿದ ನಾಟಕಗಳ ಪ್ರದರ್ಶನವನ್ನು 11ರಿಂದ 28ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮದ ಉದ್ಘಾಟನೆಯನ್ನು 11ರ ಸಂಜೆ ೬ಗಂಟೆಗೆ ಪ್ರೊ.ಎಂ.ಕೃಷ್ಣೇಗೌಡ ನೆರವೇರಿಸುವರು. ನಾಟಕ ಅಕಾಡೆಮಿ ಸದಸ್ಯೆ ಶಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ವಹಿಸುವರು. ಇವರೊಂದಿಗೆ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಂಚಾಲಕ ಸಂತೋಷ್‌ಕುಮಾರ್ ಕುಸನೂರು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಂಚಾಲಕ ಸಂತೋಷ್‌ಕುಮಾರ್ ಕುಸನೂರು, ಗುಲ್ಬರ್ಗಾ ರಂಗಾಯಣ ನಿರ್ದೇಶಕ ಮಹೇಶ್ ಬಿ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: