ಪ್ರಮುಖ ಸುದ್ದಿಮೈಸೂರು

ಹಕ್ಕಿಜ್ವರ ಭೀತಿ: ಮೈಸೂರು ಮೃಗಾಲಯದಲ್ಲಿ ಮುನ್ನೆಚ್ಚರಿಕೆ ಕ್ರಮ

ದೇಶದ ಹಲವೆಡೆ ಹಕ್ಕಿಜ್ವರ ಹಬ್ಬಿರುವ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ಹಕ್ಕಿ ಜ್ವರ(ಎಚ್‍5ಎನ್‍1) ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಮೃಗಾಲಯದ ಅಧಿಕಾರಿಗಳಿಗೆ ಭಾರತದ ಕೇಂದ್ರೀಯ ಮೃಗಾಲಯ ಪ್ರಾಧಿಕಾರ(ಸಿಝೆಡ್ಎ) ಸೂಚಿಸಿದೆ.

ಕಾರಂಜಿ ಕೆರೆಯಲ್ಲೂ ಹಲವು ಪ್ರಭೇದದ ಹಕ್ಕಿಗಳು ಇರುವುದರಿಂದ ಇಲ್ಲಿಯೂ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮೈಸೂರು ಮೃಗಾಲಯದ ನಿರ್ದೇಶಕಿ ಕಮಲಾ ಕೆ. ಮಾತನಾಡಿ, ಪ್ರವಾಸಿಗರು ಕೈ-ಕಾಳು ತೊಳೆದಬಳಿಕಷ್ಟೇ ಅವರನ್ನು ಮೃಗಾಲಯದ ಆವರಣದೊಳಗೆ ಬಿಡಲಾಗುತ್ತಿದೆ. ಕೀಟನಾಶಕ ಉಪಯೋಗಿಸಿ ಹಕ್ಕಿಗಳ ಪಂಜರಗಳನ್ನು ಪ್ರತಿದಿನ ತೊಳೆಯುವಂತೆ ಮತ್ತು ಯಾವುದಾದರೂ ಹಕ್ಕಿ ಮೃತಪಟ್ಟಲ್ಲಿ ಕೂಡಲೇ ಗಮನಕ್ಕೆ ತರುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಹಕ್ಕಿ ಮೃತಪಟ್ಟಿರುವ ಬಗ್ಗೆ ವರದಿಯಾಗಿಲ್ಲ ಎಂದರು.

ಕೋಳಿಮಾಂಸವನ್ನು ಚೆನ್ನಾಗಿ ತೊಳೆದು ಬೇಯಿಸಿದ ಮೇಲಷ್ಟೇ ಮೃಗಾಲಯದ ಪ್ರಾಣಿಗಳಿಗೆ ಕೊಡಲಾಗುತ್ತಿದೆ. ವಲಸೆ ಬರುವ ಹಕ್ಕಿಗಳು ಜ್ವರವನ್ನು ಹರಡುವ ಸಾಧ್ಯತೆಗಳಿರುವುದರಿಂದ ಅವುಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಎಚ್‍5ಎನ್‍1ನಿಂದ ಕೆಲ ಹಕ್ಕಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ದೆಹಲಿ ಮೃಗಾಲಯವನ್ನು ಕೆಲ ದಿನಗಳ ಕಾಲ ಮುಚ್ಚಲಾಗಿದೆ.

Leave a Reply

comments

Related Articles

error: