ಮೈಸೂರು

ಸಾಹಿತ್ಯ ಶ್ರೀಸಾಮಾನ್ಯನ ಸೊತ್ತು ಟಾಲ್ ಸ್ಟಾಯ್ ವಾದ : ಟಾಲ್ ಸ್ಟಾಯ್ ಬಣ್ಣಿಸಿದ ನೀಗೂ ರಮೇಶ್

ಮೈಸೂರು,ಸೆ.9:- ಟಾಲ್ ಸ್ಟಾಯ್ ತುಂಬಾ ಹತಾಶರಾಗಿ, ಆತ್ಮಹತ್ಯೆ ಮಾಡಿಕ್ಕೊಳ್ಳಲು ತೀರ್ಮಾನಿಸಿದಾಗ, 17ರ ಹರೆಯದ  ‘ಸೂಫೀಯಾ’ ಅವರು ಟಾಲ್ ಸ್ಟಾಯ್ ಬದುಕಿನಲ್ಲಿ ಮಹತ್ತರ ಬದಲಾವಣೆ ಮಾಡಿ ಸಾಹಿತ್ಯ ಕೃಷಿಗೆ ಪ್ರೇರಣೆ ನೀಡಿದರು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ನೀಗೂ ರಮೇಶ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮೈಸೂರು ಬಳಗ ವತಿಯಿಂದ ಶನಿವಾರ ಆಯೋಜಿಸಲಾದ ‘ಲಿಯೋ ಟಾಲ್ ಸ್ಟಾಯ್ ಅವರ   ಜನ್ಮದಿನದ ನೆನಪಿನ ಉಪನ್ಯಾಸ ಕಾರ್ಯಕ್ರಮ ಟಾಲ್ ಸ್ಟಾಯ್ ಅವರ ಬದುಕು ಮತ್ತು ವ್ಯಕ್ತಿತ್ವ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ರುಸೊ ಅವರ ಬರವಣಿಗೆಗಳಿಂದ ಟಾಲ್ ಸ್ಟಾಯ್  ಪ್ರಭಾವಿತರಾದರು. ತನ್ನ 23ನೇ  ವಯಸ್ಸಿನಲ್ಲಿ ರಹಸ್ಯವನ್ನು ಹುಡುಕುವ ಛಲ ಹೊಂದಿದ್ದರು. ಸಾಹಿತ್ಯ  ಶ್ರೀಸಾಮಾನ್ಯನ ಸೊತ್ತು ಎಂಬುದು ಅವರ ವಾದ ಎಂದು ಟಾಲ್ ಸ್ಟಾಯ್ ಕುರಿತು ಬಣ್ಣಿಸಿದರು .

ಕಾರ್ಯಕ್ರಮದಲ್ಲಿ  ಟಾಲ್ ಸ್ಟಾಯ್ ಕಾದಂಬರಿಗಳ ಕುರಿತು  ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ವಿವರಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಭಾರ ನಿರ್ದೇಶಕಿ ಡಾ. ವಿಜಯಕುಮಾರಿ ಎಸ್ ಕರಿಕಲ್,  ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀರಂಗಪಟ್ಟಣದ ಡಾ. ಸಿ. ದೊಡ್ಡೇಗೌಡ , ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: