ಮೈಸೂರು

ರಾಜ್ಯಪಾಲರ ನಡೆ ಖಂಡಿಸಿ ಕ ರಾ ದ ಸಂ ನಿಂದ ಸೆ.15ರಂದು ಪ್ರತಿಭಟನೆ

ಮೈಸೂರು,ಸೆ.9 : ಮುಂಬಡ್ತಿ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಕೂಡಲೇ ರಾಜ್ಯಪಾಲರು ಅಂಗೀಕರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಸೆ.15ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ತಿಳಿಸಿದರು.

ರಾಜ್ಯಪಾಲರು ಇತ್ತೀಚಿನ ದಿನಗಳಲ್ಲಿ ದಲಿತಪರವಾದ ವಿಚಾರಗಳ ವಿಷಯಗಳಲ್ಲಿ ವಿನಾಕಾರಣ ಕಾಲಾಹರಣ ಮಾಡುತ್ತಿದ್ದಾರೆ, ಆ ಮೂಲಕ ಸಾಮಾಜಿಕ ನ್ಯಾಯದ ವಿರೋಧಿ ನಿಲುವು ತಳೆದಿದ್ದು, ಈಗ ಮುಂಬಡ್ತಿ ವಿಚಾರದಲ್ಲಿ ಸರ್ಕಾರ ಎಸ್ಸಿ ಎಸ್ಟಿ ನೌಕರರ ಬಗ್ಗೆ ರಾಜ್ಯಪಾಲರು ವಿನಾಕಾರಣ ಸುಗ್ರೀವಾಜ್ಞೆಯನ್ನು ಹಲವು ಕಾರಣ ಕೇಳಿ ವಾಪಸ್ಸು ಕಳುಹಿಸಿದ್ದು, ಕಾರಣ ಕೇಳಿಯೂ ಮಸೂದೆ ಅನುಮೋದನೆ ನೀಡದೆ ದಲಿತ ವಿರೋಧಿ ನಿಲುವು ತಾಳಿರುವುದನ್ನು ಕರಾದಸಂಸ ತೀವ್ರವಾಗಿ ವಿರೋಧಿಸಿದೆ.

ಇತ್ತೀಚೆಗೆ ರಾಜ್ಯದಲ್ಲಿ ದಲಿತರ ಮನೆಗಳಿಗೆ ಬಂದು ಊಟ ಮಾಡುತ್ತಿರುವ ಬಿಜೆಪಿಯವರು ರಾಜ್ಯಪಾಲರ ದಲಿತ ವಿರೋಧಿ ನೀತಿಯನ್ನೇಕೆ ಪ್ರಶ್ನಿಸುತ್ತಿಲ್ಲ, ಅವರಿಗೆ ನಿಜವಾಗಲೂ ದಲಿತರ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯವೇ ಸ್ವಯಂ ನಿರ್ಧರಿಸಿ ದಲಿತರ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲು ರಾಜ್ಯಪಾಲರಲ್ಲಿ ಒತ್ತಡವೇರಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿ, ಈ ಹಿನ್ನಲೆಯಲ್ಲಿ ಸೆ.15ರಂದು ನಡೆಯುವ ಪ್ರತಿಭಟನೆಯ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು  ವಿಭಾಗದ ಸಂಚಾಲಕ ಜೀವನಹಳ್ಳ ಆರ್.ವೆಂಕಟೇಶ್, ಜಿಲ್ಲಾ ಸಂಚಾಲಕ ರಾಜಶೇಖರ ಕೋಟಿ, ಮಂಡ್ಯ ಜಿಲ್ಲಾ ಸಂಚಾಲಕ ಕುಬೇರಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: