ಪ್ರಮುಖ ಸುದ್ದಿಮೈಸೂರು

ಡಿಪೋದಲ್ಲಿ ಹಣ ಕಳವು ಪ್ರಕರಣ: ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಅಮಾನತು

ಚಾಮರಾಜ ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋದಲ್ಲಿ ಇರಿಸಲಾದ ಸುಮಾರು 28 ಲಕ್ಷ ರೂ. ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‍ಆರ್‍ಟಿಸಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಅವರು ಗುರುವಾರ ಡಿಪೋ ಮ್ಯಾನೇಜರ್, ಅಧಿಕಾರಿ ಮತ್ತು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಳವು ನಡೆದ ದಿನ ಡಿಪೋದಲ್ಲಿದ್ದ ಮ್ಯಾನೇಜರ್ ಮಹದೇವ ಸ್ವಾಮಿ, ಅಕೌಂಟ್ಸ್ ಮೇಲ್ವಿಚಾರಕ ಶಿವಪ್ರಸಾದ್, ಹಣಕಾಸು ವಿಭಾಗದ ಕ್ಲರ್ಕ್ ಶ್ರೀಕಾಂತ್ ಮತ್ತು ಭದ್ರತಾ ಸಿಬ್ಬಂದಿಯಾದ ಮಹೇಶ್ ಮತ್ತು ಸಂತೋಷ್ ಅವರನ್ನು ಅಮಾನತುಗೊಳಿಸಲಾಗಿದೆ.

 

Leave a Reply

comments

Related Articles

error: