ಮೈಸೂರು

ಕಾಳಿಂಗರಾವ್ ಗಾನಮಂಟಪ ಉದ್ಘಾಟನೆ ಅ.28ರಂದು

ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪಿ.ಕಾಳಿಂಗ ರಾವ್ ಗಾನಮಂಟಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಶುಕ್ರವಾರದಂದು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ಕುಮಾರ್ ಮೆಂ.ಎನ್. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ, 96 ಲಕ್ಷ ರು. ವೆಚ್ಚದಲ್ಲಿ ಈ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯು ಬಯಲು ರಂಗಮಂದಿರದ ಮಾದರಿಯಲ್ಲಿದ್ದು, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಗ್ರೀನ್‍ ರೂಮ್‍ಗಳಿವೆ. 600ರಿಂದ 800 ಮಂದಿ ಈ ರಂಗಮಂಟಪದಲ್ಲಿ ಕುಳಿತುಕೊಳ್ಳಬಹುದು. ಈ ವೇದಿಕೆಯನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ ಎಂದರು.

ನೂತನ ವೇದಿಕೆಯಲ್ಲಿ ಅ.28ರಿಂದ ಡಿಸೆಂಬರ್ 3ರವರೆಗೆ 14 ಸಾಂಸ್ಕೃತಿಕ ಕಾರ್ಯಕ್ರಮಗಳು ನಿಯೋಜನೆಗೊಂಡಿವೆ. ರಂಗಮಂದಿರ ಉದ್ಘಾಟನೆಯ ನಿಟ್ಟಿನಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಬಿ.ವಿ.ರಾಜರಾಮ್ ನಿರ್ದೇಶಿಸಿರುವ ನಾಟಕ ಪ್ರದರ್ಶನ ನಡೆಯಲಿದ್ದು, ನಟ ಮತ್ತು ರಂಗಭೂಮಿ ಕಲಾವಿದ ಮುಖ್ಯಮಂತ್ರಿ ಚಂದ್ರು ಅಭಿನಯಿಸಲಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಪ್ರವಾಸಿಗರ ಸಂಖ್ಯೆ 60 ಸಾವಿರಕ್ಕೆ ಏರಿದೆ. 400 ಕಾರು, 800 ದ್ವಿಚರ್ಕ ವಾಹನಗಳು, ನೂರಕ್ಕೂ ಹೆಚ್ಚು ಬಸ್‍ಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಈ ವರ್ಷದ ದಸರಾ ವಸ್ತುಪ್ರದರ್ಶನ ಯಶಸ್ವಿಯಾಗಿದೆ. ಸರಕಾರದ ಎಲ್ಲ ಇಲಾಖೆಗಳು ಸ್ಟಾಲ್‍ಗಳನ್ನು ಆರಂಭಿಸಿವೆ. 29 ಜಿಲ್ಲಾ ಪಂಚಾಯಿತಿಗಳು ಸ್ಟಾಲ್‍ಗಳನ್ನು ತೆರೆದಿವೆ ಎಂದರು.

Leave a Reply

comments

Related Articles

error: