ಮೈಸೂರು

‘ನವೀಕರಿಸಬಹುದಾದ ಇಂಧನ’ದ ಬಗ್ಗೆ ಎರಡು ದಿನಗಳ ಕಾರ್ಯಾಗಾರ

ಮೈಸೂರಿನ ಎಟಿಎಂಇ ಕಾಲೇಜಿನಲ್ಲಿ ‘ನವೀಕರಿಸಬಹುದಾದ ಮತ್ತು ಉಳಿಸಕೊಳ್ಳಬಹುದಾದ ಇಂಧನ’ ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿರುವ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಸೌರ ತಂತ್ರಜ್ಞಾನದ ರಾಷ್ಟ್ರೀಯ ತರಬೇತಿ ಕೇಂದ್ರ ಬೆಂಗಳೂರು ನಿರ್ದೇಶಕ ಡಾ.ಎಚ್. ನಾಗಣ್ಣ ಗೌಡ ಉದ್ಘಾಟಿಸಿದರು.

ಕಾಲೇಜಿನ ತಾರಸಿ ಮೇಲೆ ನಿರ್ಮಿಸಲಾದ 100 ಕೆವಿ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಕ್ಕೆ ಚೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಚಾಲನೆ ನೀಡಿದರು.

ಭವಿಷ್ಯತ್ತಿಗೆ ನವೀಕರಿಸಬಹುದಾದ ಇಂಧನದ ಅಗತ್ಯದ ಬಗ್ಗೆ ಡಾ.ಎಚ್. ಗೌಡ ಮಾತನಾಡಿ, ಪ್ರಪಂಚದಲ್ಲಿ ಕೆಟ್ಟ ಜನರ ಹಿಂಸೆಗಿಂತ ಒಳ್ಳೆಯವರ ಮೌನದಿಂದ ಅರಾಜಕತೆ ಸೃಷ್ಟಿಯಾಗಿದೆ. ನೈಸರ್ಗಿಕವಾದ ಸೌರ ಶಕ್ತಿಯನ್ನು ಬಳಸಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸಿ ಎಂದರು.

ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಎಲ್. ಅರುಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: