ಕರ್ನಾಟಕ

ಗೌರಿ ಕೊಲೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ : ಬಿಎಸ್‍ಪಿ ಅಸಮಾಧಾನ

ರಾಜ್ಯ(ಮಡಿಕೇರಿ) ಸೆ.9 :-  ಪ್ರಗತಿಪರ ಚಿಂತಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ತೋರಿದ ಅಗೌರವವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಪ್ರೇಮ್‍ಕುಮಾರ್, ದುಷ್ಕೃತ್ಯವೆಸಗಿದ ಹಂತಕರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಂದವರ ಧ್ವನಿಯಾಗಿ  ಕಾರ್ಯನಿರ್ವಹಿಸುತ್ತಿದ್ದ ಗೌರಿ ಲಂಕೇಶ್ ಅವರ ಹತ್ಯೆಯನ್ನು ಕಠೋರ ಶಬ್ದಗಳಿಂದ ಖಂಡಿಸಬೇಕಾಗಿದೆ, ಪ್ರಗತಿಪರ ಚಿಂತಕರ ಹತ್ಯೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಕೊಡಗಿನ ಬಾಳೆಲೆಯಲ್ಲಿ ಸಾಲ ಮರುಪಾವತಿಸಲಿಲ್ಲ ಎನ್ನುವ ಕಾರಣಗಳ ಹಿನ್ನೆಲೆಯಲ್ಲಿ ದಲಿತ ಯುವಕ ಹರೀಶ್ ಎಂಬಾತನನ್ನು ನಾಯಿಗಳಿಂದ ಕಚ್ಚಿಸಿರುವ ಘಟನೆಯ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಕಷ್ಟಕ್ಕೆ ಸಿಲುಕಿರುವ ದಲಿತ ಯುವಕ ಹರೀಶ್‍ಗೆ ಪರಿಹಾರವನ್ನು ನೀಡಲು ಜಿಲ್ಲಾಡಳಿತ ಮುಂದಾಗಬೇಕು. ತಪ್ಪಿದ್ದಲ್ಲಿ  ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮೊಣ್ಣಪ್ಪ , ಬಿಎಸ್‍ಪಿ ಜಿಲ್ಲಾ ಸಂಯೋಜಕ ರಫೀಕ್ ಖಾನ್ , ದಿಲೀಪ್ ಹಾಗೂ  ನಾಗಾರ್ಜುನ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: