ಕರ್ನಾಟಕ

ತಾಲೂಕು ಸಮಿತಿ ಸಭೆ: ಸೆ.11 ರಂದು

ಸೋಮವಾರಪೇಟೆ, ಸೆ.9: ತುಳುವೆರ ಜನಪದ ಕೂಟದ ವತಿಯಿಂದ ಸೆ.11ರಂದು ಪಟ್ಟಣದ ಸಫಾಲಿ ಹಾಲ್‍ನಲ್ಲಿ ತಾಲೂಕು ಸಮಿತಿ ಸಭೆ ನಡೆಯಲಿದೆ ಎಂದು ಕೂಟದ ತಾಲೂಕು ಅಧ್ಯಕ್ಷ ಕೆ.ಪಿ.ದಿನೇಶ್ ಹೇಳಿದರು.

ತುಳು ಭಾಷಿಕರ ಕಲೆ ಸಂಸ್ಕೃತಿಯನ್ನು ಬೆಳೆಸಲು ತುಳು ಬಾಂಧವರು ಸಂಘಟಿತರಾಗುವುದು ಅನಿವಾರ್ಯವಾಗಿದೆ. ಅಲ್ಲದೆ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಲು ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲು ಸಮಿತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ತುಳು ಭಾಷಿಕರನ್ನು ಬೇಧ ಭಾವವಿಲ್ಲದೆ ಒಂದೆಡೆ ಸಂಘಟಿಸುವುದು. ಆರ್ಥಿಕವಾಗಿ ತೀರ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುವುದು. ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು, ಕಲೆಯ ಬಗ್ಗೆ ತರಬೇತಿ ನೀಡುವುದು ಸೇರಿದಂತೆ ಇನ್ನಿತರ ಜನಪರ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜನಪದ ಕೂಟದ ಪ್ರಧಾನ ಕಾರ್ಯದರ್ಶಿ ಸಂತೋಷ್ ರೈ, ಉಪಾಧ್ಯಕ್ಷ ಬಿ.ಎಂ.ದಾಮೋಧರ್, ಪದಾಧಿಕಾರಿಗಳಾದ ಆನಂದ್, ಬಿ.ಜೆ.ಪ್ರಶಾಂತ್, ಪ್ರೇಮ್ ಕುಮಾರ್, ಮಂಜುನಾಥ್ ಚೌಟ ಇದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: