ಪ್ರಮುಖ ಸುದ್ದಿಮೈಸೂರು

ಬ್ಲೂ ವೇಲ್ ಗೇಮ್ ನಂತಹ ಅಪಾಯಕಾರಿ ಆಟದಿಂದ ಮಕ್ಕಳನ್ನು ದೂರವಿಡಿ : ಚೆಸ್ ಗ್ರ್ಯಾಂಡ್ ಮಾಸ್ಟರ್ ತೇಜ್ ಕುಮಾರ್

ಮೈಸೂರು,ಸೆ.9:- ಬ್ಲೂ ವೇಲ್ ಗೇಮ್ ನಂತಹ ಅಪಾಯಕಾರಿ ಆಟಕ್ಕೆ ಮಕ್ಕಳು ಆಕರ್ಷಿತರಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಚೆಸ್ ಗ್ರ್ಯಾಂಡ್ ಮಾಸ್ಟರ್ ತೇಜ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಬಲ್ಲಾಳವೃತ್ತದಲ್ಲಿರುವ ರಾಮಮಂದಿರದಲ್ಲಿ ಶನಿವಾರ ಕರ್ನಾಟಕ ಚದುರಂಗ ಸಂಸ್ಥೆ ಮತ್ತು ಹೆಚ್.ವಿ.ರಾಜೀವ್ ಸ್ನಾಹ ಬಳಗದ ವತಿಯಿಂದ ಕರ್ನಾಟಕದ‌ ಮೊಟ್ಟಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್ ತೇಜ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳನ್ನು ಬ್ಲೂ ವೇಲ್ ಗೇಮ್ ಬದಲು ಚೆಸ್ ನಂತಹ ಬುದ್ಧಿಗೆ ಕೆಲಸ ನೀಡುವ, ಚಾತುರ್ಯ ವೃದ್ಧಿಯಾಗುವ ಕ್ರೀಡೆಯತ್ತ ತೊಡಗಿಸಿ. ಹಿಂದಿಗಿಂತ ಇತ್ತೀಚಿನ ವರ್ಷಗಳಲ್ಲಿ ಚೆಸ್ ಗೆ ಮಹತ್ವ ಬರುತ್ತಿದೆ. ಮೊದಲು ವರ್ಷದಲ್ಲಿ ಮೂರ್ನಾಲ್ಕು ಟೂರ್ನಿಗಳು ಮಾತ್ರ ನಡೆಯುತ್ತಿತ್ತು. ಆದರೆ ಈಗ ವರ್ಷವಿಡೀ ಚೆಸ್ ಪಂದ್ಯಾವಳಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಚೆಸ್ ಬಗ್ಗೆ ಆಸಕ್ತಿ ಹುಟ್ಟಿಸುವಂತೆ ಸರ್ಕಾರ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ತವರೂರು ಸಾಂಸ್ಕೃತಿಕ ನಗರಿಯಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಖುಷಿ ತಂದಿದೆ. ಸಾಂಸ್ಕೃತಿಕ ನಗರಿ ಮೈಸೂರು ನನ್ನ ತವರೂರು. ಇಲ್ಲಿ ನನಗೆ ಇಷ್ಟೊಂದು ಗೌರವ ನೀಡುತ್ತಿರುವುದು ಸಂತಸ ತಂದಿದೆ ಚೆಸ್ ಪಂದ್ಯಗಳ ಬಗ್ಗೆ ಇನ್ನಷ್ಟು ಜಾಗೃತಿ ಬರಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಸಹಕಾರಿ ಹೆಚ್.ವಿ.ರಾಜೀವ್, ಮೈಸೂರು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಸುದರ್ಶನ್, ಡಾ. ಸಿ. ಕೃಷ್ಣ, ಪ್ಯಾಟ್ರನ್ ಸಿ.ಕೆ. ಮುರಳೀಧರ್ ಮೊದಲಾದವರಿದ್ದರು. (ಆರ್.ವಿ,ಎಸ್.ಎಚ್)

Leave a Reply

comments

Related Articles

error: