
ಮೈಸೂರು, ಸೆ.9 : ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರಿಕರಿಗೆ ಸಾಂಸ್ಕೃತಿ ಹಾಗೂ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ.
ಸಾಂಸ್ಕೃತಿಕ ಸ್ಪರ್ಧೆ :
ಈ ಸ್ಪರ್ಧೆಯು ಸೆಪ್ಟೆಂಬರ್ 11 ರಂದು ಜೆ.ಎಸ್.ಎಸ್. ಹಳೆ ಆಸ್ಪತ್ರೆಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆಯಲಿದೆ. 60 ರಿಂದ 70 ವರ್ಷದವರಿಗೆ, 71 ರಿಂದ 80 ವರ್ಷದವರಿಗೆ ಮತ್ತು 80 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ಪುರಷರಿಗೆ ಪ್ರತ್ಯೇಕವಾಗಿ ಮೂರು ವಿಭಾಗಗಳಲ್ಲಿ ಜನಪದ ಗೀತೆ ಮತ್ತು ಏಕಪಾತ್ರಾಭಿಯನ ಸ್ಪರ್ಧೆಗಳು ನಡೆಯಲಿದೆ.
ಆಸಕ್ತರು ಸೆಷ್ಟೆಂಬರ್ 9 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಜೆ.ಎಸ್.ಎಸ್. ಹಿರಿಯ ನಾಗರಿಕರ ಸಹಾಯವಾಣಿ 0821-2548253 ನ್ನು ಸಂಪರ್ಕಿಸಬಹುದು.
ಕ್ರೀಡಾ ಸ್ಪರ್ಧೆ :
ಕ್ರೀಡಾ ಸ್ಪರ್ಧೆಯು ಸೆಪ್ಟೆಂಬರ್ 13 ರಂದು ಜೆ.ಕೆ.ಗ್ರೌಂಡ್ಸ್ ನಲ್ಲಿ ನಡೆಯಲಿದೆ. 60 ರಿಂದ 70 ವರ್ಷದವರೆಗಿನ ಪುರುಷರಿಗೆ 100 ಮೀಟರ್ ಓಟ ಹಾಗೂ ಶಾಟ್ಪುಟ್ ಸ್ಪರ್ಧೆ, 71 ರಿಂದ 80 ವರ್ಷದವರೆಗಿನ ಪುರುಷರಿಗೆ 75 ಮೀಟರ್ ಓಟ ಹಾಗೂ ಶಾಟ್ಪುಟ್ ಸ್ಪರ್ಧೆ ಮತ್ತು 80 ವರ್ಷ ಮೇಲ್ಪಟ್ಟ ಪುರುಷರಿಗೆ 200 ಮೀಟರ್ ನಡಿಗೆ ಹಾಗೂ ಥ್ರೋಯಿಂಗ್ ದ ಕ್ರಿಕೆಟ್ ಬಾಲ್ ಸ್ಪರ್ಧೆ ನಡೆಯಲಿದೆ.
60 ರಿಂದ 70 ವರ್ಷದವರೆಗಿನ ಮಹಿಳೆಯರಿಗೆ 400 ಮೀಟರ್ ನಡಿಗೆ ಹಾಗೂ ಥ್ರೋಯಿಂಗ್ ದ ಕ್ರಿಕೆಟ್ ಬಾಲ್ ಸ್ಪರ್ಧೆ, 71 ರಿಂದ 80 ವರ್ಷದವರೆಗಿನ ಮಹಿಳೆಯರಿಗೆ 200 ಮೀಟರ್ ನಡಿಗೆ ಹಾಗೂ ಥ್ರೋಯಿಂಗ್ ದ ಕ್ರಿಕೆಟ್ ಬಾಲ್ ಸ್ಪರ್ಧೆ, ಮತ್ತು 80 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 100 ಮೀಟರ್ ನಡಿಗೆ ಹಾಗೂ ಥ್ರೋಯಿಂಗ್ ದ ಕ್ರಿಕೆಟ್ ಬಾಲ್ ಸ್ಪರ್ಧೆ ನಡೆಯಲಿದೆ.
ಆಸಕ್ತರು ಸೆಪ್ಟೆಬರ್ 12 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳುಬೇಕು. ಹೆಚ್ಚಿನ ಮಾಹಿತಿಗೆ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ, ಮೊಬೈಲ್ ಸಂಖ್ಯೆ 9448425408/ 9141506905 ಅನ್ನು ಸಂಪರ್ಕಿಸಬಹುದು.
(ಎನ್.ಬಿ)