ಕರ್ನಾಟಕಮೈಸೂರು

ದಸರಾ ಪ್ರಮುಖ ಆಕರ್ಷಣೆ “ಯುವ ಸಂಭ್ರಮ” ನಿರೂಪಕರಿಗಾಗಿ ಸೆ.10 ರಂದು ಸಂದರ್ಶನ

ಮೈಸೂರು, ಸೆ.9 : ಯುವಕ-ಯುವತಿಯರೇ ನಿಮ್ಮ ಮಾತಿನ ಚತುರತೆ ಮೂಲಕ ಕಲಾ ಪ್ರೇಮಿಗಳನ್ನು ಸೆಳೆಯಬಲ್ಲವರಾದರೆ, ಮನರಂಜನೆ ಕೊಡಬಲ್ಲಿರಾದರೆ, ಕಾರ್ಯಕ್ರಮಗಳನ್ನು ನಿರೂಪಿಸುವ ಸಾಮರ್ಥ್ಯ ನಿಮ್ಮಲ್ಲಿದ್ದರೆ “ಯುವ ಸಂಭ್ರಮ” ವೇದಿಕೆ ನಿಮಗೆ ಅವಕಾಶ ಕೊಡಲಿದೆ.

ಯುವ ದಸರಾ ಉಪಸಮಿತಿಯು ಯುವ ಸಂಭ್ರಮ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಲು ಆಸಕ್ತರಿರುವ ಯುವಕ, ಯುವತಿಯರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಿದೆ. ಸಂದರ್ಶನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಇದೇ ಭಾನುವಾರ, ಸೆಪ್ಟಂಬರ್ 10 ರಂದು ಜಿಲ್ಲಾಪೋಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  91084 60800 ಸಂಪರ್ಕಿಸಬಹುದು.

ಕಾಲೇಜು ಯುವಜನೆತೆಗಾಗಿಯೇ ರೂಪಿಸಿರುವ ಮನರಂಜನಾ ಕಾರ್ಯಕ್ರಮ ಯುವ ಸಂಭ್ರಮ. ಪ್ರತಿಷ್ಠಿತ ಯುವ ದಸರಾಕ್ಕೆ ಮೊದಲ ಹೆಜ್ಜೆಯಾಗಿ ನಡೆಸಲಾಗುವ ಯುವ ಸಂಭ್ರಮ ಸೆಪ್ಟಂಬರ್ 12 ರಿಂದ 18 ರವರೆಗೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

(ಎನ್.ಬಿ)

Leave a Reply

comments

Related Articles

error: