ಕರ್ನಾಟಕಮೈಸೂರು

ಸಬರ್ಬ್ ಬಸ್ ನಿಲ್ದಾಣದ ಬಳಿ ರಸ್ತೆ ಡಾಂಬರೀಕರಣ : ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ

ಮೈಸೂರು, ಸೆ.9 : ಹಾರ್ಡಿಂಜ್ ವೃತ್ತದಿಂದ ಸಬರ್ಬ್ ಬಸ್ ನಿಲ್ದಾಣದ ಪ್ರವೇಶ ದ್ವಾರದವರೆಗೆ ರಸ್ತೆ ಡಾಂಬರೀಕರಣ ನಡೆಸುವ ಸಂಬಂಧ ವಾಹನ ಸಂಚಾರಕ್ಕೆ ನಿರ್ಬಂಧಿಸಿ ಮತ್ತು ಬದಲಿ ಮಾರ್ಗ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ.

ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ ಹಾರ್ಡಿಂಜ್ ವೃತ್ತದಿಂದ-ಸಬರ್ಬ್ ಬಸ್ ನಿಲ್ದಾಣದ ಪ್ರವೇಶ ದ್ವಾರದವರೆಗಿನ ರಸ್ತೆಯಲ್ಲಿ  ಡಾಂಬರೀಕರಣ ಮಾಡುವ ಕಾಮಗಾರಿಯನ್ನು ನಡೆಯುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಭಂಧ ಮತ್ತು ಬದಲಿ ಮಾರ್ಗ ಈ ಕೆಳಕಂಡಂತೆ ಇರುತ್ತದೆ.

ನಿರ್ಬಂಧ :

ಬಿ-ಎನ್ ರಸ್ತೆಯಲ್ಲಿ ಹಾರ್ಡಿಂಜ್ ವೃತ್ತದಿಂದ ಉತ್ತರಕ್ಕೆ ಛತ್ರಿಮರದ ಜಂಕ್ಷನ್‍ವರೆಗೆ ಸಂಚರಿಸುತ್ತಿದ್ದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬದಲಿ ಮಾರ್ಗ :

ಬಿ.ಎನ್ ರಸ್ತೆಯಲ್ಲಿ ಹಾರ್ಡಿಂಜ್‍ವೃತ್ತದಿಂದ ಉತ್ತರಕ್ಕೆ ಸಂಚರಿಸುತ್ತಿದ್ದ ಎಲ್ಲಾ ಮಾದರಿಯ ವಾಹನಗಳು ಹಾರ್ಡಿಂಜ್ ವೃತ್ತದಿಂದ ಸಿದ್ಧಾರ್ಥ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ರಾಣಾ ಟೆರೇಸಾ ವೃತ್ತಕ್ಕೆ ಸಾಗಿ ಎಡತಿರುವು ಪಡೆದು, ಎಂ.ಎಂ. ರಸ್ತೆಯ ಮೂಲಕ ಬೆಂಗಳೂರು-ನೀಲಗಿರಿ ರಸ್ತೆ ತಲುಪಿ ಮುಂದೆ ಸಾಗಬೇಕು.

ಸಿದ್ದಾರ್ಥನಗರ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಹಾರ್ಡಿಂಜ್ ವೃತ್ತದಿಂದ ರಾಣಾ ಟೆರೇಸಾ ವೃತ್ತದವರೆಗೆ ಮತ್ತು ಎಂ.ಎಂ. ರಸ್ತೆಯಲ್ಲಿ ಛತ್ರಿಮರದ ಜಂಕ್ಷನ್‍ನಿಂದ ರಾಣಾ ಟೆರೇಸಾ ವೃತ್ತದವರೆಗೆ ಕಾಮಗಾರಿ ನಡೆಯುವ ದಿನಗಳಿಗೆ ಮಾತ್ರ ಅನ್ವಯವಾಗುವಂತೆ ಪ್ರಸ್ತುತ ಇರುವ ಏಕಮುಖ ಸಂಚಾರದ ನಿರ್ಬಂಧವನ್ನು ಸಡಿಲಗೊಳಿಸಿ, ದ್ವಿ-ಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: