ಕರ್ನಾಟಕ

ಸೆ. 12 ರಂದು ಯಜ್ಞ ನಾರಾಯಣ ರಸಪ್ರಶ್ನೆ ಸ್ಪರ್ಧೆ

ಮೈಸೂರು, ಸೆ.10 : ಮಕ್ಕಳಿಗೆ ಕೃಷಿ ಪದ್ಧತಿ, ಕೃಷಿಯ ಪ್ರಾಮುಖ್ಯತೆ, ಕೃಷಿ ಇತಿಹಾಸ ಹಾಗೂ ಸಸ್ಯಗಳ ಭಾಗಗಳನ್ನು ಪರಿಚಯಿಸಲು ಎರಡನೇ ಹಂತದ ಯಜ್ಞ ನಾರಾಯಣ ರಸಪ್ರಶ್ನೆ ಸ್ಪೆರ್ಧೆಯನ್ನು ಸೆಪ್ಟೆಂಬರ್ 12 ರಂದು 11 ಗಂಟೆಗೆ ನಾಗನಹಳ್ಳಿಯಲ್ಲಿರುವ ಕೃಷಿ ಸಂಶೋಧನ ಸಂಸ್ಥೆಯಲ್ಲಿ ನಡೆಸಲಾಗುವುದು ಎಂದು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದ ಡೀನ್ ಪಿ ಶಿವಶಂಕರ್  ಅವರು ತಿಳಿಸಿದರು.

ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಕೆ.ಆರ್.ಎಸ್ ಹಾಗೂ ನಾಗನಹಳ್ಳಿ ಕೃಷಿ ಸಂಶೋಧನ ಕೇಂದ್ರಗಳು ಕಾರ್ಯನಿರ್ವಹಿಸುವ ಮೊದಲು ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಬರಗಾಲದಿಂದ ಜನರು ಗೂಳೆ ಹೋಗುತ್ತಿದ್ದರು. ಕೃಷಿ ಸಂಶೋಧನ ಕೇಂದ್ರದಲ್ಲಿ ಹಲವು ಭತ್ತದ ತಳಿ ಹಾಗೂ ಕಬ್ಬಿನ ತಳಿಗಳನ್ನು ಪರಿಚಯಿಸಲಾಗಿದೆ ಇದರಿಂದ ಇಲ್ಲಿ ಕೃಷಿ ಪದ್ಧತಿಗಳು ಉತ್ತಮವಾಗಿ ನಡೆಯುತ್ತಿದೆ ಎಂದರು.

ಕೃಷಿ ಸಂಶೋಧನಾ ಕೇಂದ್ರವು 1917 ರಲ್ಲಿ ಪ್ರಾರಂಭವಾಗಿದ್ದು, ಕೇಂದ್ರದಲ್ಲಿ ಈ ವರ್ಷ  ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ರೈತರಿಗೆ ತರಬೇತಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಶತಮಾನೋತ್ಸವದ ಅಂಗವಾಗಿ ಮೊದಲ ಹಂತದ ರಶಪ್ರಶ್ನೆ ಸ್ಪರ್ಧೆಯನ್ನು ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ  ಈಗಾಗಲೇ ನಡೆಸಲಾಗಿದ್ದು, 243 ತಂಡಗಳು ಭಾಗವಹಿಸಿದೆ. ಅವುಗಳಲ್ಲಿ 18 ಶಾಲೆಗಳು/ತಂಡಗಳನ್ನು ಆಯ್ಕೆ ಮಾಡಲಾಗಿದೆ. ಈ 18 ತಂಡಗಳ ಎರಡನೇ ಹಾಗೂ ಮೂರನೇ ಸುತ್ತಿನ ಸ್ಪರ್ಧೆಯನ್ನು  ಸೆಪ್ಟೆಂಬರ್ 12 ರಂದು ನಡೆಸಲಾಗುವುದು. ಮೂರನೇ ಸುತ್ತಿಗೆ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಮೊದಲನೇ ವಿಜೇತ ತಂಡಕ್ಕೆ ರೂ 10,000/-, ಎರಡನೇ ತಂಡಕ್ಕೆ ರೂ 7,500/- ಹಾಗೂ ಮೂರನೇ ತಂಡಕ್ಕೆ ರೂ 5,000/- ಬಹುಮಾನವನ್ನು ಡಿಸೆಂಬರ್/ ಜನವರಿ ಮಾಹೆಯಲ್ಲಿ ನಡೆಯುವ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು ಎಂದರು.

ಯಜ್ಞ ನಾರಾಯಣ ಅವರು ಎರಡನೇ ಕೃಷಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದು, ಅವರ ಮಕ್ಕಳು ಅವರ ನೆನಪಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ ಎಂದು ತಿಳಿಸಿದರು.

(ಎನ್.ಬಿ)

Leave a Reply

comments

Related Articles

error: