ಮೈಸೂರು

‘ಬೆಲ್ಲದ ದೋಣಿ’ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಸಮಾರಂಭ

ಚಾಮರಾಜನಗರದ ರಂಗವಾಹಿನಿ ಸಂಸ್ಥೆ ಮತ್ತು ಅಂತರಸಂತೆ ಪ್ರಕಾಶನದ ವತಿಯಿಂದ ಹನೂರು ಚೆನ್ನಪ್ಪ ಅವರ ‘ಬೆಲ್ಲದ ದೋಣಿ’ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಅ.28 ರ ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗವಾಹಿನಿಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್ ಉದ್ಘಾಟನೆ ಮಾಡಲಿದ್ದು, ಸಂಸದ ಆರ್.ಧೃವನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಂಗಾಯಣದ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್, ಡಾ.ಕಾ.ರಾಮೇಶ್ವರಪ್ಪ, ಕನ್ನಡಪ್ರಭದ ಸಂಪಾದಕ ಅಂಶೀ ಪ್ರಸನ್ನಕುಮಾರ್ ಉಪಸ್ಥಿತರಿರುತ್ತಾರೆ. ರಂಗನಿರ್ದೇಶಕ ಎನ್.ಶಿವಲಿಂಗಯ್ಯ ಮತ್ತು ರಂಗಭೂಮಿ ಕಲಾವಿದ ಪುಟ್ಟಣ್ಣ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಅವರು ಹೇಳಿದರು.

ಸಂಪೂರ್ಣ ಗ್ರಾಮೀಣ ಸೊಗಡನ್ನು ಈ ನಾಟಕದಲ್ಲಿ ಕಾಣಬಹುದಾಗಿದೆ. ಸಮಾಜದಲ್ಲಿನ ಒಂದು ಉತ್ತಮ ಬದಲಾವಣೆಗೆ ಈ ನಾಟಕ ನಾಂದಿಯಾಡುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಕೀಲ ಟಿ.ನಾಗರಾಜು,ರುಬೀನ್ ಸಂಜಯ್, ದೇವಾನಂದ್, ಗೌತಮ್ ಹಾಜರಿದ್ದರು.

Leave a Reply

comments

Related Articles

error: