ಮೈಸೂರು

ಸರ್ಕಾರದ ವೈಫಲ್ಯ ಪ್ರಗತಿಪರರ ಹತ್ಯೆ : ಹಂತಕರ ಶೀಘ್ರ ಪತ್ತೆಗೆ ಒತ್ತಾಯ

ಮೈಸೂರು,ಸೆ.10 : ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ನಾಲ್ಕು ದಿನ ಕಳೆದರೂ ಹಂತಕರನ್ನು ಕಂಡು ಹಿಡಿಯುವಲ್ಲಿ ಸರ್ಕಾರ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿಯೆಂದು ಡಾ.ಬಿ.ಆರ್.ಅಂಬೇಡ್ಕರ್ ಇಂಟರ್ ನ್ಯಾಷನಲ್ ಫೌಂಡೇಶನ್ ಸರ್ಕಾರದ ವೈಫಲ್ಯವನ್ನು ಖಂಡಿಸಿದೆ.

ಕಳೆದ ಎರಡು ವರ್ಷಗಳ ಹಿಂದೆ ನಡೆದ ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಹತ್ಯೆ ಸೇರಿದಂತೆ ಗೌರಿ ಲಂಕೇಶ್ ಅವರ ಹತ್ಯೆಯು ರಾಜ್ಯ ಸರ್ಕಾರದ ವೈಫಲ್ಯವನ್ನು ಪುಷ್ಠೀಕರಿಸಿದೆ,  ಕಳೆದೆರಡು ವರ್ಷಗಳಿಂದಲೂ ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನದ ಫಲವಾಗಿ ಪ್ರಗತಿಪರ ಚಿಂತಕರ ಹತ್ಯೆಯು ರಾಜ್ಯದಲ್ಲಿ ನಡೆಯುತ್ತಿದ್ದು, ಹಂತಕರನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಇಂದಿಗೂ ಸಾಧ್ಯವಾಗದೆ ಇರುವುದು ಶೋಚನೀಯವೆಂದು ದೂರಿರುವ ಸಂಘಟನೆಯು, ಇಂತಹ ಘಟನೆಗಳು ಮರುಕಳಿಸಲು ಸರ್ಕಾರದ ಬೇಜವಾಬ್ದಾರಿ ಅಸಮರ್ಥ ಆಡಳಿತ ವೈಖರಿಯೇ ಕಾರಣ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರ ಸಮರ್ಥ ಅಧಿಕಾರಿಗಳ ಮುಖಾಂತರ ತನಿಖೆ ನಡೆಸಿ ಶೀಘ್ರ ಹಂತಕರನ್ನು ಬಂಧಿಸಿ ರಾಜ್ಯದ ಜನತೆಗೆ ಸರ್ಕಾರದ ಮೇಲೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಪ್ರಕಟಣೆಯಲ್ಲಿ ಜಿಲ್ಲಾಧ್ಯಕ್ಷೆ ಮಂಗಳಗೌರಿ ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: