ಮೈಸೂರು

ಅಪರಿಚಿತ ಮಹಿಳೆ ಸಾವು : ಪತ್ತೆಗೆ ಮನವಿ

ಮೈಸೂರು,ಸೆ.10 : ಕರಕುಶಲನಗರದ ಆಟೋ ನಿಲ್ದಾಣದ ಬಳಿ ಅಸ್ವಸ್ಥಳಾಗಿ ಬಿದ್ದಿದ್ದ ಮಹಿಳೆಯೊಬ್ಬಳನ್ನು ಮೇಟಗಳ್ಳಿ ಪೊಲೀಸರು  ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ.

ಸುಮಾರು 50 ವರ್ಷದೊಳಗಿರು ಮೃತಳು, ಸಿಮೆಂಟ್ ಕಲರ್ ಸ್ವೆಟರ್, ಪಾಚಿ ಬಣ್ಣದ ಹೂವಿನ ಚಿತ್ರವಿರುವ ನೈಟಿ, ಕಪ್ಪು ಬಣ್ಣದ ಪ್ಯಾಂಟ್ ದರಿಸಿದ್ದಾಳೆ. ಆಕೆಯ ಎಡಗೈ ಮೇಲೆ ಗಂಡು ಭೇರುಂಡ ಪಕ್ಕದಲ್ಲಿಯೇ ರಂಗೋಲಿ ಅಚ್ಚೆಗಳಿವೆ. ಅಲ್ಲದೇ ಬಲಗೈ ಮೇಲೆ ಯಾವುದೋ ಭಾಷೆಯಲ್ಲಿರುವ ಅಚ್ಚೆ ಇದೆ.

ಈಕೆಯ ಶವವನ್ನು ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಮೇಲ್ಕಂಡ ಚಹರೆಯುಳ್ಳ ಮಹಿಳೆ ಬಗ್ಗೆ ಮಾಹಿತಿ ತಿಳಿದವರು ಮೇಟಗಳ್ಳಿ ಪೊಲೀಸ್ ಠಾಣೆ ದೂ.ಸಂ. 0821 2418339, 2148315, 2148115 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: