ಕರ್ನಾಟಕಪ್ರಮುಖ ಸುದ್ದಿಮೈಸೂರು

ರಾಜಕಾಲುವೆ ಮೇಲೆ ಮನೆ ಕಟ್ಟುವುದು, ಒತ್ತುವರಿ ಮಾಡಿರುವುದೇ ಬೆಂಗಳೂರಿನಲ್ಲಿ ನೀರು ತುಂಬಿಕೊಳ್ಳಲು ಕಾರಣ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಸೆ.10:- ರಾಜಕಾಲುವೆ ಮೇಲೆ ಮನೆ ಕಟ್ಟುವುದು, ಒತ್ತುವರಿ ಮಾಡಿರುವುದೇ ಬೆಂಗಳೂರಿನಲ್ಲಿ ನೀರು ತುಂಬಿಕೊಳ್ಳಲು ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಂಡಕಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ  ಮಾತನಾಡಿದ ಅವರು ಶನಿವಾರ ಅನಂತಕುಮಾರ್ ಅವರು ಬೆಂಗಳೂರಲ್ಲಿ ಮಳೆ ಅವಾಂತರಕ್ಕೆ ಕಾಂಗ್ರೆಸ್ ಕಾರಣ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿ ಅವರು ಕೂಡ ಇದ್ದರಲ್ಲ ಅವರು ಏನು ಮಾಡಿದರು? ಅವರು ಏನೂ ಮಾಡಲಿಲ್ಲ. ಕಳೆದ ನಾಲ್ಕು ವರ್ಷದಿಂದ ಮಾಡುತ್ತಿದ್ದೇವೆ. ಮೂರು ವರ್ಷದಿಂದ ಹೆಚ್ಚು ಮಳೆ ಬೀಳುತ್ತಿದೆ. ಅದಕ್ಕಾಗಿ ಸಚಿವ ಜಾರ್ಜ್, ಮೇಯರ್, ಕಮೀಷನರ್ ಅವರಿಗೆ ಸೂಚಿಸಿದ್ದೇನೆ. ಜಾರ್ಜ್ 3 ಗಂಟೆವರೆಗೂ ಕೆಲಸ ಮಾಡುತ್ತಿದ್ದಾರೆ. ರಾಜಕಾಲುವೆ ಮೇಲೆ ಮನೆ ಕಟ್ಟುವುದು, ಒತ್ತುವರಿ ಮಾಡುವುದು ಇದಕ್ಕೆ ಸಮಸ್ಯೆಯಾಗಿದೆ. ಅತ್ಯಂತ ಅವಶ್ಯ ಸಂದರ್ಭ ಮಳೆ ಬೀಳುತ್ತಿದೆ.ವ್ಯವಸಾಯಕ್ಕೆ ಅನುಕೂಲವಾಗಿದೆ. ಮಳೆ ಬಾರದಿದ್ದರೆ ತೊಂದರೆ ಆಗುತ್ತಿತ್ತು.ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ರಾಜಕೀಯಕ್ಕೂ ಮಳೆಗೂ ಸಂಬಂಧವಿಲ್ಲ.ಬರಗಾಲವನ್ನೂ ಸಮರ್ಥವಾಗಿ ಎದುರಿಸಿದ್ದೇವೆ. 2018 ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ.ಅದರಲ್ಲಿ‌ ಯಾವುದೇ ಅನುಮಾನವಿಲ್ಲ ಎಂದರು. ಕೆಎಸ್ ಒಯುಗೆ ಮಾನ್ಯತೆ ಸಿಗುವುದು ಅನುಮಾನ ವಿಚಾರ. ಕೇಂದ್ರಕ್ಕೆ ಪತ್ರ ಬರೆದಿದ್ದೇನೆ.ಇದು ಸರ್ಕಾರದ ತಪ್ಪಲ್ಲ.ಹಿಂದಿನ ವಿಸಿ ಮಾಡಿದ ತಪ್ಪಿನಿಂದ ಆಗಿದೆ. ಅದನ್ನು ನೀಡಲೇಬೇಕಿದೆ ಎಂದು ತಿಳಿಸಿದರು. ಗೌರಿ ಲಂಕೇಶ್ ಹತ್ಯೆ ನಂತರ ಸಾಹಿತಿಗಳಿಗೆ ಭದ್ರತೆ ನಾನೇ ನೀಡಲು ಮುಂದಾಗಿದ್ದೇನೆ. ಗೌರಿ ಯಾವತ್ತೂ ಕೂಡ ರಕ್ಷಣೆ ಕೊಡಿ ಅಂತ ಹೇಳಿಲ್ಲ.ಆದರೆ, ಅವರ ಸುರಕ್ಷತೆಯಿಂದ ಮಾತ್ರ ನಾವೇ ಕೊಡುತ್ತಿದ್ದೇವೆ.ಮುಂಚೂಣಿಯಲ್ಲಿರುವ ಸಾಹಿತಿಗಳಿವೆ ರಕ್ಷಣೆ ನೀಡಲಾಗುತ್ತಿದೆ. ಗೌರಿ ಕೇಸ್ ನಲ್ಲಿ ಪ್ರಗತಿಯಾಗುತ್ತಿದೆ. ಆದರೆ, ಆರೋಪಿಗಳ ಹತ್ಯೆ ಪತ್ತೆ ಹಚ್ಚುವಷ್ಟು ಆಗುತ್ತಿಲ್ಲ ಎಂದು ತಿಳಿಸಿದರು.

ಅವಧಿಗೂ ಮುನ್ನ ಚುನಾವಣೆ ಯಾವ ಕಾರಣಕ್ಕೂ ಇಲ್ಲ. ಏನಿದ್ದರೂ ಮುಂದಿನ‌ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಉತ್ತಮವಾಗಿದೆ.ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಲಿದೆ ಎಂದರು. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನ್ಯಾಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ನಿಯೋಗ ಹೋಗಿದೆ. ಬ್ಯಾಂಕ್ ಗಳಲ್ಲಿ ಸ್ಥಳೀಯ ವ್ಯವಹಾರ ಮಾಡಲು ಪ್ರಾದೇಶಿಕ ಭಾಷೆ ಗೊತ್ತಿರಬೇಕು. ನಾನೂ ಸಹ ಕೇಂದ್ರಕ್ಕೆ ಈ ಬಗ್ಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: