ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೋದಿ ಭಾಷಣ ಕಡ್ಡಾಯಕ್ಕೆ ಆದೇಶಿಸಿದ ಯುಜಿಸಿ ನಿಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ

ಮೈಸೂರು,ಸೆ.11:- ಪ್ರಧಾನಿ ನರೇಂದ್ರ ಮೋದಿ ಭಾಷಣ ಕಡ್ಡಾಯ ವೀಕ್ಷಣೆಗೆ ಯುಜಿಸಿ ಆದೇಶದ ಮಾಡಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಆಕ್ಷೇಪಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು  ದೀನ್ ದಯಾಳ್ ಭಾಷಣ ಜನ್ಮ ಶತಾಬ್ದಿ, ಸ್ವಾಮಿ ವಿವೇಕಾನಂದ ಶಿಕಾಗೋ ವಿಶ್ವಧರ್ಮ 125 ವರ್ಷಾಚರಣೆ ಹಿನ್ನೆಲೆಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮೋದಿ ಭಾಷಣ ಹಿಂದುತ್ವದ ಭಾಷಣವಾದರೆ  ಕೇಳುವಂತಿಲ್ಲ. ದೀನ್ ದಯಾಳ್ ಜನ್ಮಶತಾಬ್ಧಿ ಭಾಷಣವಾದರೆ ಅದು ಹಿಂದುತ್ವದ ಭಾಷಣವೇ ಆಗಿರುತ್ತದೆ. ಅಂತಹ ಭಾಷಣ ಕೇಳುವ ಅಗತ್ಯವಿಲ್ಲ. ಈ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದೆ. ಸಂಪೂರ್ಣ ಮಾಹಿತಿ ಇಲ್ಲ ವಿಶ್ವವಿದ್ಯಾಲಯದ  ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ನಾನು ಯಾರ ಜೊತೆಗೂ ಮಾತನಾಡಿಲ್ಲ. ಹೋಗಿ ಮಾತನಾಡುತ್ತೇನೆ ಎಂದರು. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರೈತರ ಬಿತ್ತನೆ ಬೀಜ,ಗೊಬ್ಬರಕ್ಕೆ ಯಾವುದೇ ತೊಂದರೆ ಇಲ್ಲ. ರೈತರು ಗೊಬ್ಬರ ಕೇಳಲು ಹೋದಾಗ ಹಾವೇರಿಯಲ್ಲಿ ಗೋಲಿಬಾರ್ ಮಾಡಿದರು. ಆದರೆ ಅಂತಹ ಪರಿಸ್ಥಿತಿ ನಮಗೆ ಇಲ್ಲ. ನಮ್ಮ ಸರ್ಕಾರ ರೈತರ ಅಗತ್ಯತೆ ಪೂರೈಸಲಿದೆ ಎಂದರು. ನಾಲೆಗಳಿಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಕ್ರಿಯಿಸಿ ಪ್ರತಿ ತಿಂಗಳು 15 ದಿನ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ. ಆ ನೀರಿನಲ್ಲಿ ರೈತರು ಏನು ಬೆಳೆ ಬೆಳೆಯಲು ಸಾಧ್ಯವೋ ಅದನ್ನು ಬೆಳೆದುಕೊಳ್ಳಲಿ. ಮಳೆಯಾಗುತ್ತಿರೋ ಹಿನ್ನಲೆ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ ಎಂದರು. ಈ ಸಂದರ್ಭ ಶಾಸಕ ಎಂ.ಕೆ.ಸೋಮಶೇಖರ್, ಸಂಸದ ಧೃವನಾರಾಯಣ ಮತ್ತಿತರರು ಸಿಎಂ ಜೊತೆಗಿದ್ದರು. (ಕೆ.ಎಸ್,ಆರ್.ವಿ,ಎಸ್.ಎಚ್)

Leave a Reply

comments

Related Articles

error: