ಕರ್ನಾಟಕಪ್ರಮುಖ ಸುದ್ದಿ

ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿಲ್ಲ, ಸುಳ್ಳು ಸುದ್ದಿಯಿಂದ ಅವಮಾನವಾಗಿದೆ : ಸಾಲುಮರದ ತಿಮ್ಮಕ್ಕ

ಬೆಂಗಳೂರು, ಸೆ.11 : ಸರ್ಕಾರ ನೀಡಿರುವ 10 ಲಕ್ಷ ರೂ. ಸಹಾಯಧಾನವನ್ನು ತಿರಸ್ಕರಿಸಿ ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದೇವೆ ಎನ್ನುವ ಸುದ್ದಿ ಸುಳ್ಳು ಎಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.

ನನ್ನ ಜೀವನ ನಿರ್ವಹಣೆಗಾಗಿ ಸರ್ಕಾರ ನೀಡಿರುವ ಸಹಾಯಧನವನ್ನು ಹೊರತುಪಡಿಸಿ ನಾವು ಯಾವುದೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಮತ್ತು ಈ ಸಹಾಯಧಾನವನ್ನು ನಾವು ತಿರಸ್ಕರಿಸಿಯೂ ಇಲ್ಲ. ಸರ್ಕಾರದ ಸಹಾಯ ಸ್ವೀಕರಿಸಿ ನಮ್ಮ ನಮ್ಮ ಕಷ್ಟಗಳನ್ನು ಸರಿದೂಗಿಸುತ್ತಿದ್ದೇವೆ. ಆದರೆ ಕೆಲವು ಜಾಲತಾಣಗಳಲ್ಲಿ ಸರ್ಕಾರ ನೀಡಿರುವ ಹಣ ನಿರಾಕರಿಸಿ ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಡಲಾಗಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರ ಎಂದು ನಾಡೋಜ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.

ನನ್ನ ದತ್ತು ಪುತ್ರ ಡಾ.ಉಮೇಶ್ ಆಗಲಿ ಅಥವಾ ನಾನಾಗಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಉಮೇಶ್‍ನಿಂದಾಗಿ ನನ್ನ ಜೀವನ ಸುಗಮವಾಗಿ ಸಾಗಿದೆ. ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಈ ರೀತಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವುದು ನಮಗೆ ತುಂಬಾ ಬೇಸರ ಉಂಟು ಮಾಡಿದೆ. ನಾವು ಸರ್ಕಾರಕ್ಕೆ ಯಾವುದೇ ರೀತಿ ಬೇಡಿಕೆ ಇಟ್ಟಿಲ್ಲ. ಈ ರೀತಿ ವದಂತಿ ಹರಡುವುದು ನಮ್ಮಿಬ್ಬರಿಗೂ ಮಾಡಿದ ಅವಮಾನ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: