ಮೈಸೂರು

ಬಿಎಸ್‍ವೈ ಮುಂದಿನ ಸಿಎಂ: ಸಂಸದ ಪ್ರತಾಪ್‍ ಸಿಂಹ ಅಭಿಮತ

ಸಿಬಿಐ ವಿಶೇಷ ಕೋರ್ಟ್ ನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕ ತೀರ್ಪು ಅವರ ರಾಜಕೀಯ ವೈರಿಗಳಿಗೆ ತಕ್ಕ ಪಾಠವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿದ್ದಾರೆ.

ಎಲ್ಲ ಕೇಸ್‍ಗಳಿಂದಲೂ ಮುಕ್ತರಾದ ಬಿಎಸ್‍ವೈಗೆ ಮೊದಲು ಶುಭಾಶಯ ತಿಳಿಸುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ತಡೆಯಲು ಯಾರಿಂದಲೂ ಆಗಲಿಲ್ಲ. ಅದಕ್ಕೆ ಅವರ ವಿರೋಧಿಗಳು ಅವರನ್ನು ಬೇರೆ ರೀತಿಯಲ್ಲಿ ಕುಗ್ಗಿಸಲು ಸಂಚು ರೂಪಿಸಿದರು. ಆದರೆ ಇದೀಗ ಸತ್ಯಕ್ಕೆ ಜಯ ಸಿಕ್ಕಿದ್ದು, ಮುಂದಿನ ಮುಖ್ಯಮಂತ್ರಿ ಬಿಎಸ್‍ವೈ ಆಗುತ್ತಾರೆ. 2018 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಪ್ರತಾಪ್‍ ಸಿಂಹ ಅಭಿಪ್ರಾಯಪಟ್ಟರು.

ಶ್ರೀನಿವಾಸ್‌ಪ್ರಸಾದ್ ಅವರಿಗೆ ಬಿಜೆಪಿ ಸೂಕ್ತ ಪಕ್ಷವಾಗಿದ್ದು, ನಮ್ಮ ಪಕ್ಷಕ್ಕೆ ಬಂದರೆ ಆತ್ಮೀಯವಾಗಿ ಸ್ವಾಗತಿಸಿ ಅವರಿಗೆ ನೀಡಬೇಕಾದ ಸ್ಥಾನಮಾನವನ್ನು ನೀಡುತ್ತೇವೆ. ಕಾಂಗ್ರೆಸ್ ಪಕ್ಷ ಅವರನ್ನು ಅಗೌರವದಿಂದ ಕಂಡಿದೆ. ಹಾಗಾಗಿ ಅವರು ಕಾಂಗ್ರೆಸ್‍ನಿಂದ ಹೊರಬಂದಿದ್ದಾರೆ. ಅವರನ್ನು ಬಿಜೆಪಿಗೆ ಕರೆತರಲು ಮಾತುಕತೆ ಸಹ ಆಗಿದ್ದು, ತಮ್ಮ ನಿಲುವನ್ನು ಸದ್ಯದಲ್ಲೇ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ ದಲಿತ ಸಮುದಾಯವನ್ನು ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದು ಶ್ರೀನಿವಾಸ್ ಪ್ರಸಾದ್ ಅವರ ಸಾಧನೆ. ದಲಿತ ನಾಯಕರು ಎಷ್ಟೇ ಇದ್ದರು ಜನ ತಮ್ಮ ಮನದಲ್ಲಿ ಇಟ್ಟುಕೊಂಡಿರೋದು ಪ್ರಸಾದ್ ರನ್ನೇ ಎಂದು ಸಂಸದರು ತಿಳಿಸಿದರು.

Leave a Reply

comments

Related Articles

error: