ಪ್ರಮುಖ ಸುದ್ದಿ

ನಗದುರಹಿತ ವಹಿವಾಟಿನಿಂದ ಸಮಯ ಉಳಿತಾಯ: ಶೋಭಿ ಅಬ್ರಹಾಂ

ಪ್ರಮುಖ ಸುದ್ದಿ, ಹಾಸನ, ಸೆ.೧೧: ನಗದುರಹಿತ ವಹಿವಾಟು ನಡೆಸುವುದರಿಂದ ಸಾಕಷ್ಟು ಸಮಯ ಉಳಿತಾಯವಾಗುವುದರ ಜೊತೆಗೆ ವಹಿವಾಟು ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಅನುಕೂಲವಾಗುತ್ತದೆ ಎಂದು ಕೆನರಾ ಬ್ಯಾಂಕ್ ಕೌನ್ಸೆಲರ್ ಶೋಭಿ ಅಬ್ರಹಾಂ ಹೇಳಿದರು.
ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಹಮ್ಮಿಕೊಂಡಿದ್ದ ನಗದುರಹಿತ ವಹಿವಾಟು ಮತ್ತು ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಗದುರಹಿತ ವಹಿವಾಟು ವಿಧಾನಗಳಾದ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಸ್‌ಎಂಎಸ್ ಬಾಂಕಿಂಗ್ ಮತ್ತು ಎಟಿಎಂ ಬಳಕೆ ಕುರಿತು ಪಿಪಿಟಿ ಮೂಲಕ ವಿವರವಾಗಿ ತಿಳಿಸಿಕೊಟ್ಟರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ (ಸಿಬಿಆರ್‌ಎಸ್‌ಇಟಿಐ) ತರಬೇತುದಾರ ರವಿ ಅವರು, ಸ್ವ-ಉದ್ಯೋಗ ಕೈಗೊಳ್ಳುವುದರಿಂದ ಬಹಳ ಬೇಗ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಸಾಧಿಸಬಹುದು ಎಂದು ತಿಳಿಸಿ, ಸಿಬಿಆರ್‌ಎಸ್‌ಇಟಿಐ ವತಿಯಿಂದ ನೀಡಲಾಗುವ ವೃತ್ತಿ ತರಬೇತಿಗಳ ಕುರಿತು ಮಾಹಿತಿ ನೀಡಿದರು.
ಬ್ಯಾಂಕ್ ಅಧಿಕಾರಿ ವಿ.ಜಿ. ಭಟ್, ಶಾಲೆ ಮುಖ್ಯೋಪಾಧ್ಯಾಯ ವಿಕ್ರಂ ದೇವ್ ಪ್ರಭು, ಹಿರಿಯ ಶಿಕ್ಷಕಿ ಜಯರತ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: