ಮೈಸೂರು

ಹೊಸ ನೋಟ್ ಮತ್ತು ನಾಣ್ಯ ವಿನಿಮಯ ಮೇಳ

ನಜರ್‍ಬಾದ್‍ನಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ‘ಹೊಸ ನೋಟ್ ಮತ್ತು ನಾಣ್ಯ ವಿನಿಮಯ ಮೇಳ’ವನ್ನು ಆಯೋಜಿಸಿತ್ತು. ಈ ಮೇಳದಲ್ಲಿ 10,20, 50 ಮತ್ತು 100 ರು. ನೋಟನ್ನು ವಿನಿಮಯ ಮಾಡಲಾಯಿತು.

ಕೆನರಾ ಬ್ಯಾಂಕಿನ ಮೈಸೂರು ವಿಭಾಗದ ಮುಖ್ಯಸ್ಥ ದಿವಾಕರ್ ಶೆಟ್ಟಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಈ ರೀತಿಯ ಮೇಳಗಳನ್ನು ನಿಯಮಿತವಾಗಿ ನಡೆಸಲಿದ್ದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮೇಳ ಆಯೋಜಿಸಲಾಗಿದೆ ಎಂದರು.

ವಿಭಾಗೀಯ ಮ್ಯಾನೇಜರ್ ಎಂ.ಎಸ್. ಗೋಪಾಲಕೃಷ್ಣ ಮತ್ತು ಶಾಮಣ್ಣ ಉಪಸ್ಥಿತರಿದ್ದರು.

Leave a Reply

comments

Related Articles

error: