ಮೈಸೂರು

ನ್ಯಾಯಾಂಗ ವ್ಯವಸ್ಥೆಯಲ್ಲಿ ನೋಟರಿಗಳ ಮಹತ್ವಿಕೆ: ಪಿ.ಜಿ.ಎಂ.ಪಾಟೀಲ್

ಮೈಸೂರು, ಸೆ.೧೧: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನೋಟರಿಗಳ ಸಂಘ ಹಾಗೂ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ, ಜಿಲ್ಲೆ ೩೧೭-ಎ, ಜಿಲ್ಲಾ ಕಾನೂನು ಘಟಕದ ಸಂಯುಕ್ತಾಶ್ರಯದಲ್ಲಿ ನೋಟರಿಗಳಿಗೆ ಒಂದು ದಿನದ ಕಾನೂನು ಕಾರ್ಯಾಗಾರವನ್ನು ನಗರದ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ಬಾರ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ನೋಟರಿಗಳ ಮಹತ್ವ ವಿವರಿಸುತ್ತಾ, ನೋಟರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಯಾವುದೇ ದಾಖಲೆಗಳನ್ನು ಪ್ರಮಾಣಿಸುವ ಮುನ್ನ ಸಂಬಂಧಿತ ವ್ಯಕ್ತಿಗಳ ಹಾಜರಿ ಮತ್ತು ಸಹಿಯನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಬೇಕೆಂದು ಹೇಳಿದರು.
ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಸಂಸ್ಥೆಯ ಜಿಲ್ಲೆ ೩೧೭-ಎ ೨೦೧೭-೧೮ರ ೨ನೇ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಮಾತನಾಡಿ, ಪ್ರಕರಣಗಳ ಬಗ್ಗೆ ಅಧಿಕಾರಿಗಳು ಕಾಳಜಿ ಮತ್ತು ಉತ್ಸುಕತೆ ತೋರಬೇಕು. ಸಾಕ್ಷಿ ನೀಡಲು ಹಿಂಜರಿಯಬಾರದು. ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ಕೇವಲ ೩ ರಿಂದ ೪ ನೋಟರಿಗಳು ಇದ್ದು, ಇಂದು ಅದರ ಸಂಖ್ಯೆ ೧೨೬ಕ್ಕೆ ಏರಿದೆ ಎಂದರೆ ಅದು ನೋಟರಿ ಸಂಸಾರವೇ ಆಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದರು.
ವಕೀಲ ಮತ್ತು ನೋಟರಿ ಬಿ.ಎಸ್.ಪ್ರಶಾಂತ್, ಕಾರ್ಯಾಗಾರ ಸಮಿತಿ ಅಧ್ಯಕ್ಷ ಹಾಗೂ ನೋಟರಿ ಪಿ.ರಮೇಶ್, ಲಯನ್ ಎನ್.ಎಸ್.ಸತ್ಯನಾರಾಯಣ ಗುಪ್ತ, ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಆಸಿಫ್ ಅಲಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಲಾ ಗೈಡ್ ಪತ್ರಿಕೆ ಸಂಪಾದಕ ಹಾಗೂ ವಕೀಲ ಹೆಚ್.ಎನ್.ವೆಂಕಟೇಶ್ ಹಾಗೂ ಹಲವಾರು ಹಿರಿಯ ಹಾಗೂ ಕಿರಿಯ ನೋಟರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: