ಪ್ರಮುಖ ಸುದ್ದಿವಿದೇಶ

ಅಫ್ಘಾನಿಸ್ತಾನ : ಐಎಸ್ ಉಗ್ರರಿಂದ 35 ನಾಗರಿಕರ ಅಪಹರಣ!

ಕಾಬೂಲ್, ಸೆ.11 : ಕ್ರೌರ್ಯದ ರಾಯಭಾರಿಗಳಂತೆ ವರ್ತಿಸುತ್ತಿರುವ ಐಎಸ್ ಉಗ್ರರು ಯುದ್ಧ ಮತ್ತು ಹಿಂಸಾಚಾರದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಜಾವ್‍ಝಾನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಐಎಸ್ ಮತ್ತು ತಾಲಿಬಾನ್ ಉಗ್ರರು 35ಕ್ಕೂ ಹೆಚ್ಚು ನಾಗರಿಕರನ್ನು ಅಪಹರಿಸಿ ಹೊತ್ತೊಯ್ದಿದ್ದಾರೆ.

ಉಗ್ರರು ಕುಶ್‍ಟಿಪಾ ಮತ್ತು ಡರ್ಜಾಬ್ ಜಿಲ್ಲೆಗಳಲ್ಲಿ ಪ್ರತ್ಯೇಕ ಚೆಕ್‍ಪೋಸ್ಟ್ ನಿರ್ಮಿಸಿ ಸ್ಥಳೀಯ ನಾಗರಿಕರನ್ನು ವಶಕ್ಕೆ ತೆಗೆದುಕೊಂಡು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ವಿರೋಧಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಹಾಗೂ ಭದ್ರತಾಪಡೆಗಳಿಗೆ ಮಾಹಿತಿ ನೀಡುತ್ತಿದಾರೆ ಎಂಬ ಆರೋಪದ ಮೇಲೆ 35ಕ್ಕೂ ಹೆಚ್ಚು ಮಂದಿ ಉಗ್ರರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಉಗ್ರರು ಅಪಹೃತ ನಾಗರಿಕರನ್ನು ಎಲ್ಲಿ ಇರಿಸಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಅವರ ರಕ್ಷಣೆಗಾಗಿ ಭದ್ರತಾಪಡೆಗಳು ತೀವ್ರ ಕಾರ್ಯಾಚರಣೆ ಕೈಗೊಂಡಿವೆ ಎಂದು ತಿಳಿದುಬಂದಿದೆ.

(ಎನ್.ಬಿ)

Leave a Reply

comments

Related Articles

error: