ಪ್ರಮುಖ ಸುದ್ದಿವಿದೇಶ

ಪಶ್ಚಿಮ ಕರಾವಳಿಯತ್ತ ಮುಖ ಮಾಡಿದ ಇರ್ಮಾ ಚಂಡಮಾರುತ

ವಾಷಿಂಗ್ಟನ್,ಸೆ.11-ಅಮೆರಿಕದ ಫ್ಲೋರಿಡಾದಲ್ಲಿ ಅಪ್ಪಳಿಸಿದ್ದ ಇರ್ಮಾ ಚಂಡಮಾರುತ ಈಗ ಪಶ್ಚಿಮ ಕರಾವಳಿಯತ್ತ ಮುಖಮಾಡಿದೆ. ಹೀಗಾಗಿ ಈಗಾಗಲೇ ಪಶ್ಚಿಮ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಹಾಗೂ ಬಿರುಗಾಳಿ ಬೀಸುತ್ತಿದೆ.

ಸುಮಾರು 130 ಮೈಲುಗಳ ವೇಗದಲ್ಲಿ ಇರ್ಮಾ ಚಂಡಮಾರುತದ ರಭಸಕ್ಕೆ ಫ್ಲೋರಿಡಾದಲ್ಲಿ ಅವಳಿ ಭೂಕುಸಿತ ಸಂಭವಿಸಿದ ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದಾರೆ. ಚಂಡಮಾರುತ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 5.2 ಮಿಲಿಯನ್ ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಂಜೆ  ವೇಳೆಗೆ ಇರ್ಮಾ ಚಂಡಮಾರುತ ಮ್ಯಾಕ್ರೋ ದ್ವೀಪ ಪ್ರವೇಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮಿಯಾಮಿ ಪ್ರಾಂತ್ಯದಿಂದ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಈ ಹಿಂದೆ ಕೆರಿಬಿಯನ್ ದ್ವೀಪದಲ್ಲಿ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ವಿನಾಶಕಾರಿ ಇರ್ಮಾ ಚಂಡಮಾರುತ ಇದೀಗ ಕೆಟಗರಿ-4 ಪ್ರಬಲತೆಯೊಂದಿಗೆ ಫ್ಲೋರಿಡಾಗೆ ಅಪ್ಪಳಿಸಿದೆ. ಚಂಡಮಾರುತಗಳ ವೇಗಕ್ಕೆ ಅನುಗುಣವಾಗಿ ಅವುಗಳಿಗೆ ಶ್ರೇಣಿ ನೀಡಲಾಗುತ್ತದೆ. ಅದರಂತೆ ಪ್ರಸ್ತುತ ಫ್ಲೋರಿಡಾಗೆ ಅಪ್ಪಳಿಸಿರುವ ಇರ್ಮಾ ಚಂಡಮಾರುತ 4ನೇ ಶ್ರೇಣಿಗೆ ಸೇರಿದ ವೇಗದೊಂದಿಗೆ ಫ್ಲೋರಿಡಾಗೆ ಅಪ್ಪಳಿಸಿದೆ ಎಂದು ಹವಮಾನ ತಜ್ಞರು ಹೇಳಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: