ಕ್ರೀಡೆದೇಶಪ್ರಮುಖ ಸುದ್ದಿ

19 ವರ್ಷದೊಳಗಿನ ತಂಡದಲ್ಲಿ ಸ್ಥಾನ ಪಡೆದ ಸಚಿನ್ ಪುತ್ರ ಅರ್ಜುನ್‍

ಮುಂಬೈ, ಸೆ.11 : ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಕೂಡ 19 ವರ್ಷದೊಳಗಿನ ಮುಂಬೈ ಕ್ರಿಕೆಟ್‍ ತಂಡದಲ್ಲಿ ಸ್ಥಾನ ಪಡೆದಿದ್ದು, ತಂದೆಯ ಹಾದಿಯಲ್ಲೇ ನಡೆಯುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾನೆ.

ಅರ್ಜುನ್ 19 ವರ್ಷದೊಳಗಿನವರ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ತಂದೆ ಮಗನ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ. ಸಚಿನ್ ತೆಂಡೂಲ್ಕರ್ ಬೌಲರ್‍ಗಳಿಗೆಲ್ಲಾ ನೀರು ಕುಡಿಸುತ್ತಿದ್ದ ಸ್ಫೋಟಕ ಬ್ಯಾಟ್‍ ಮಾಡಿದರೆ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಬ್ಯಾಟ್ಸ್’ಮನ್‍ಗಳಿಗಳ ನಿದ್ದೆಗೆಡಿಸುವ ಫಾಸ್ಟ್ ಬೌಲರ್‍ ಆಗಿ ರೂಪುಗೊಂಡಿದ್ದಾರೆ.

ಭಾರತದ 19 ವರ್ಷದೊಳಗಿನ ಆಹ್ವಾನಿತ ಏಕದಿನ ಪಂದ್ಯಾವಳಿಗೆ ಮುಂಬೈ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ಅರ್ಜುನ್’ಗೆ ಸ್ಥಾನ ನೀಡಲಾಗಿದೆ. ಸೆ.16 ರಿಂದ 23 ರ ವರೆಗೆ ಬರೋಡದಲ್ಲಿ ಪಂದ್ಯಾವಳಿ ನಡೆಯಲಿದೆ. 17 ವರ್ಷದ ಅರ್ಜುನ್ ಎಡಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದು, ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಬ್ಯಾಟ್ಸ್’ಮನ್ ಜಾನಿ ಬ್ರಿಸ್ಟೋ ಅವರನ್ನು ಯಾರ್ಕರ್ ಹಾಕುವ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಸುದ್ದಿಯಾಗಿದ್ದರು.

(ಎನ್.ಬಿ)

Leave a Reply

comments

Related Articles

error: