ಕರ್ನಾಟಕಪ್ರಮುಖ ಸುದ್ದಿ

ಕೂದಲು ಹೆಚ್ಚು ಮಾಡುವ ಔಷಧಿ ಬಳಸಿ ಪೂರ್ತಿ ಕಳಕೊಂಡ ಧಾರವಾಡದ ಯುವಕ!

ಧಾರವಾಡ, ಸೆ.11 : ಕೂದಲು ಹೆಚ್ಚಿಸಲು ಬಳಸುವ ಔಷಧ ಬಳಸುವ ಮುನ್ನ ಈ ಸುದ್ದಿ ಓದಿ. ಯಾಕಂದ್ರೆ ಕೂದಲು ಉದುರುವುದನ್ನು ತಡೆಗಟ್ಟಲು ಹೋದ ಯುವಕನೊಬ್ಬ ಈಗ ಸಂಪೂರ್ಣ ಬೋಳನಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಗಂಗಾಧರ ಹೂಗಾರ ಎಂಬ ಈ ಯುವಕನಿಗೆ ತಲೆಕೂದಲು ಉದುರುವುದು ಹೆಚ್ಚಾಗಿತ್ತು. ಹುಬ್ಬಳ್ಳಿ ಮೂಲದ ಖಾಸಗಿ ಚಿಕಿತ್ಸಾ ಕಂಪನಿಯೊಂದರ ಔಷಧ ಬಳಸಿದ್ದ ಈತ ಅದಕ್ಕಾಗಿ ಭಾರೀ ಬೆಲೆ ತೆತ್ತಿದ್ದಾನೆ. ಇದೀಗ ಅವರ ಟ್ರೀಟ್‍ಮೆಂಟ್‍ನಿಂದ ಯುವಕನ ತಲೆಕೂದಲು, ಹುಬ್ಬಿನ ಕೂದಲು ಸಂಪೂರ್ಣ ಉದುರಿ ಹೋಗಿದ್ದು, ಮೈಮೇಲಿನ ಕೂದಲು ಸಹ ಉದುರುತ್ತಿದೆ. ಮೊದಲು ಸುಂದರವಾಗಿದ್ದ ಈತ, ಈಗ ಸಂಪೂರ್ಣ ಕೂದಲು ಉದುರಿಹೋದ ಕಾರಣ ಬೋಳಾಗಿ ಕಾಣುತ್ತಿದ್ದು, ಪರಿಹಾರ ಕಾಣದೆ ಕಂಗಾಲಾಗಿದ್ದಾನೆ.

ಸುಮಾರು 60 ಸಾವಿರ ಹಣ ಮಾತ್ರವಲ್ಲದೆ ಮೈಮೇಲಿನ ಕೂದಲನ್ನೂ ಸಹ ಕಳೆದುಕೊಂಡ ಯುವಕ ನ್ಯಾಯಕ್ಕಾಗಿ ಮಾಧ್ಯಮಗಳ ಮುಂದೆ ತನ್ನ ಪರಿಸ್ಥಿತಿ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಚಿಕಿತ್ಸೆ ನೀಡಿದ ಖಾಸಗಿ ಕಂಪನಿಯು ಯಾವುದೇ ಸ್ಪಂದಿಸದೇ ಇನ್ನೂ ಚಿಕಿತ್ಸೆ ಬಾಕಿ ಇದೆ.

(ಎನ್.ಬಿ)

Leave a Reply

comments

Related Articles

error: