ಕರ್ನಾಟಕಪ್ರಮುಖ ಸುದ್ದಿ

ರೊಹಿಂಗ್ಯಾ ನರಮೇಧ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

ರಾಜ್ಯ(ಬೆಳಗಾವಿ)ಸೆ.11:-  ನೆರೆಯ ಮಯನ್ಮಾರ (ಬರ್ಮಾ)ದಲ್ಲಿ ರೊಹಿಂಗ್ಯಾ ನರಮೇಧ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಹಿಂಗ್ಯಾ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ಮತ್ತು ಅಮಾನವೀಯ ದೌರ್ಜನ್ಯ ನಡೆದಿದ್ದು ತಕ್ಷಣ ವಿಶ್ವಸಂಸ್ಥೆ ಮತ್ತು ಭಾರತ ಸರಕಾರ ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಂರ ಸಹಾಯಕ್ಕೆ ಬರಬೇಕೆಂದು ಆಗ್ರಹಿಸಿ ನಗರದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಬಾಂಧವರು ಪೀಪಲ ಕಟ್ಟಾ, ಪೋರ್ಟ್ ರಸ್ತೆ, ಭಾಜಿ ಮಾರ್ಕೇಟ್, ಅರಣ್ಯ ಇಲಾಖೆ ಕಚೇರಿ ರಸ್ತೆ ಮಾರ್ಗವಾಗಿ ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ನೆರೆಯ ಬರ್ಮಾ ದೇಶದಲ್ಲಿ ರೊಹಿಂಗ್ಯಾ ಮುಸ್ಲಿಂ ಸಮುದಾಯದ ಸ್ಥಿತಿಗತಿ ಕೆಟ್ಟು ಹೋಗಿದೆ, ಕಂಡಕಂಡಲ್ಲಿ  ದುಷ್ಕರ್ಮಿಗಳು ಮುಸ್ಲಿಂರನ್ನು ಕೊಲ್ಲುತ್ತಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಕೊಂದರೆ ಕಠಿಣ ಶಿಕ್ಷೆ ಇರುವಾಗ ಅವ್ಯಾಹತವಾಗಿ ಮಾನವರ ಕೊಲೆಯಾಗುತ್ತಿರುವುದು ವಿಶ್ವಸಂಸ್ಥೆ ಮತ್ತು ಇತರ ದೇಶಗಳ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ತಮ್ಮ ಬೇಡಿಕೆ ಮತ್ತು ಆತಂಕಗಳ ಅಂಶ ಹೊಂದಿದ ಮನವಿಯನ್ನು ಕೇಂದ್ರ ಸರಕಾರ ಮತ್ತು ವಿಶ್ವಸಂಸ್ಥೆಗೆ ಕಳಿಸಿಕೊಡುತ್ತೇನೆ ಎಂದು ತಿಳಿಸಿದರು. ಡಿಸಿಪಿ ಅಮರನಾಥರೆಡ್ಡಿ ನೇತೃತ್ವದಲ್ಲಿ ರ್ಯಾಲಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: