ಮನರಂಜನೆ

ಈ ಚಿತ್ರದ ಆ್ಯಕ್ಷನ್ ದೃಶ್ಯಕ್ಕಾಗಿ 25 ಕೋಟಿ ರೂ..!

ಮುಂಬೈ, ಸೆ.12: ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ನಂತರ ನಟ ಪ್ರಭಾಸ್ ಅದೃಷ್ಟ ಬದಲಾಗಿದೆ. ಟಾಲಿವುಡ್ ನ ಭಾರೀ ವೆಚ್ಚದ ಚಿತ್ರವಾಗಿ ಮೂಡಿ ಬಂದ ಬಾಹುಬಲಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಯಶಸ್ಸು ಕಂಡಿತು. ನಟ ಪ್ರಭಾಸ್ ಕೂಡ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಈಗ ಪ್ರಭಾಸ್ ಬಹುಬೇಡಿಕೆಯ ನಟರಾಗಿದ್ದಾರೆ.

ಟಾಲಿವುಡ್ ಅಲ್ಲದೇ ಬಾಲಿವುಡ್ ಗೂ ಪಾದಾರ್ಪಣೆ ಮಾಡಿರುವ ಪ್ರಭಾಸ್, ತಮ್ಮ ಚೊಚ್ಚಲ ಚಿತ್ರವಾದ ‘ಸಾಹೋ’ ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ‘ಸಾಹೋ’ ಚಿತ್ರದ ಕುರಿತಾಗಿ ಕುತೂಹಲಕಾರಿ ವಿಷಯವೊಂದು ಹೊರಬಿದ್ದಿದೆ.  ಚಿತ್ರತಂಡವು ‘ಸಾಹೋ’ ಚಿತ್ರದ  ಆ್ಯಕ್ಷನ್ ದೃಶ್ಯಕ್ಕಾಗಿ 25 ಕೋಟಿ ರೂ. ಖರ್ಚು ಮಾಡುತ್ತಿದೆಯಂತೆ. ಈ ವಿಷಯವನ್ನು ಚಿತ್ರ ವಿಶ್ಲೇಷಕ ರಮೇಶ್ ಬಾಲಾ ಸಾಹೋ ಚಿತ್ರದ ಬಗ್ಗೆ ಟ್ವೀಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.  ಚಿತ್ರದ ಆಕ್ಷನ್ ದೃಶ್ಯ ಶೂಟಿಂಗ್ ಗಾಗಿ ವಿಶ್ವ ಪ್ರಸಿದ್ಧ ಸ್ಟಂಟ್ ಡೈರೆಕ್ಟರ್ ಕೆನ್ನಿ ಬೇಟ್ಸ್ ಅವರನ್ನು ಚಿತ್ರ ತಂಡ ತಮ್ಮ ಟೀಂಗೆ ಸೇರಿಸಿಕೊಂಡಿದೆ. ‘ಸಾಹೋ’ದಲ್ಲಿ ನಟಿ ಶ್ರದ್ಧಾ ಕಪೂರ್, ಪ್ರಭಾಸ್ ಜೊತೆ ಸ್ಟಂಟ್ ಮಾಡಲಿದ್ದಾಳೆ. ಇದಕ್ಕಾಗಿ ಆಕೆ ತರಬೇತಿ ಪಡೆಯಲಿದ್ದಾಳೆ. (ವರದಿ: ಎಲ್.ಜಿ)

Leave a Reply

comments

Related Articles

error: