ಕರ್ನಾಟಕಪ್ರಮುಖ ಸುದ್ದಿ

10.35 ಲಕ್ಷ ರೂ. ವೆಚ್ಚದ ಉದ್ಯಾನವನ ಕಾಮಗಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಭೂಮಿಪೂಜೆ

ರಾಜ್ಯ(ಗದಗ)ಸೆ.12:- ಗದಗ ಬೆಟಗೇರಿ ವಾರ್ಡ ಸಂಖ್ಯೆ 4ರಲ್ಲಿ  85 ಲಕ್ಷ ರೂ. ವೆಚ್ಚದ ಈಜುಕೊಳ, ವಾರ್ಡ ಸಂಖ್ಯೆ  1ರಲ್ಲಿ 38 ಲಕ್ಷ ರೂ. ವೆಚ್ಚದ ಹೈಟೆಕ್ ಗೌರವ ಘಟಕ, 25 ಲಕ್ಷ ರೂ.ವೆಚ್ಚದ ರಸ್ತೆ ಅಭಿವೃದ್ಧಿ , 10.35 ಲಕ್ಷ ರೂ. ವೆಚ್ಚದ ಉದ್ಯಾನವನ ಕಾಮಗಾರಿಗಳಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಭೂಮಿಪೂಜೆ ನೆರವೇರಿಸಿದರು. ಜಿ.ಪಂ.ಅಧ್ಯಕ್ಷ ವಾಸಣ್ಣ ಕುರಡಗಿ, ಗದಗ ಬೆಟಗೇರಿ ನಗರ ಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಪೌರಾಯುಕ್ತ ಮನ್ಸೂರ ಅಲಿ, ಜಿ.ಪಂ‌. ಸದಸ್ಯ ಸಿದ್ದು ಪಾಟೀಲ, ನಗರ ಸಭೆ ಸದಸ್ಯರುಗಳು,  ಗುರಣ್ಣ ಬಳಗಾನೂರ, ಗಡ್ಡದೇವರಮಠ,  ಗಣೇಶಸಿಂಗ ಬ್ಯಾಳಿ,ಜೆ.ಕೆ.ಜಮಾದಾರ, ಅಶೋಕ ಮಂದಾಲಿ , ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: