ಮನರಂಜನೆ

ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿರುವ ನಟಿ..!

ನವದೆಹಲಿ,ಸೆ.12-ಸಿನಿಮಾದಲ್ಲಿನ ಪಾತ್ರಕ್ಕಾಗಿ ಏನು ಬೇಕಾದರೂ ಮಾಡುವ ಅದೆಷ್ಟೊ ನಟ, ನಟಿಯರು ಬಾಲಿವುಡ್ ನಲ್ಲಿದ್ದಾರೆ. ಪಾತ್ರಕ್ಕಾಗಿ ಅನೇಕ ನಟರು ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ನಟಿಯೊಬ್ಬರು ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆ.

ಹೌದು, ಹಾಲಿವುಡ್ ನ ಚಿತ್ರವೊಂದಕ್ಕಾಗಿ ನಟಿ ಪ್ರಿಯಾಂಕ ಚೋಪ್ರಾ ಸಿಕ್ಸ್ ಪ್ಯಾಕ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಕ್ವಾಂಟಿಕೋ ಹಾಗೂ ಬೇವಾಚ್ ಸಿನಿಮಾದಿಂದ ಹಾಲಿವುಡ್’ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಪ್ರಿಯಾಂಕ ಚೋಪ್ರಾ, `ಈಸಂಟ್ ಇಟ್ ರೊಮ್ಯಾಂಟಿಕ್ ‘ ಎಂಬ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಪ್ರಿಯರನ್ನು ರಂಜಿಸಲಿದ್ದಾರೆ.

ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಯೋಗ ಟೀಚರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ಪ್ರಿಯಾಂಕ ಸಿಕ್ಸ್ ಪ್ಯಾಕ್ ಮಾಡಿರೋ ದೇಹವನ್ನು ತೋರಿಸಲಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: