ಕ್ರೀಡೆಪ್ರಮುಖ ಸುದ್ದಿಮೈಸೂರು

ಮಹಿಳಾ ಕ್ರಿಕೆಟ್ ತಂಡದ ಭರವಸೆ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ದಸರಾ ಆಹ್ವಾನ

ಮೈಸೂರು,ಸೆ.12:- ದಸರಾ ಮಹೋತ್ಸವದ ಕ್ರೀಡಾ ಉಪಸಮಿತಿ ಮಂಗಳವಾರ ಬೆಂಗಳೂರಿನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಭರವಸೆ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿತು. ಉಪಸಮಿತಿಯ ಕಾರ್ಯದರ್ಶಿಗಳು ಮತ್ತು ಸೆಸ್ಕ್ ಮುಖ್ಯ ಪ್ರಬಂಧಕ ಸತೀಶ್ ಮತ್ತು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಸುರೇಶ್ ಅವರು ಸಾಂಪ್ರದಾಯಿಕವಾಗಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಫಲತಾಂಬೂಲಗಳೊಡನೆ ಅಭಿನಂದಿಸಿ, ಆತ್ಮೀಯವಾಗಿ ಆಮಂತ್ರಿಸಿದರು.

ಕ್ರೀಡಾ ಉಪಸಮಿತಿ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಆತ್ಮೀಯವಾಗಿ ಸೆ. 21 ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾ ದಸರಾ ಉದ್ಘಾಟನೆಗೆ ಅಧಿಕೃತ ಆಮಂತ್ರಣ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: