ಸುದ್ದಿ ಸಂಕ್ಷಿಪ್ತ

ಜಿ ಎಸ್ ಟಿ ಕುರಿತಾದ ರಾಜ್ಯ ಮಟ್ಟದ ವಿಚಾರ ಸಂಕಿರಣ: ಸೆ. 15 ಕ್ಕೆ

ಮೈಸೂರು, ಸೆ.12: ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಸೆ.15 ರಂದು ವಿದ್ವಾಂಸರು, ಸಂಶೋಧಕರು ಹಾಗೂ ಕಾರ್ಯ ನೀತಿ ನಿರೂಪಕರಿಗೆ ‘ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಸರಕು ಮತ್ತು ಸೇವಾ ತೆರಿಗೆಯ(ಜಿ ಎಸ್ ಟಿ) ಪರಿಣಾಮ’ ಎಂಬ ವಿಷಯಸ ಮೇಲೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಶ್ರೀ ನಟರಾಜ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಶ್ರೀ ಹೊಸಮಠದ  ಚಿದಾನಂದ ಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು, ಮೈಸೂರು ವಿವಿಯ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಅಧ್ಯಕ್ಷೆ ಪ್ರೊ.ಇಂದುಮತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ 3 ಪ್ರಮುಖ ಸುದ್ದಿಗೋಷ್ಠಿಗಳಿದ್ದು, ಮಂಡ್ಯ ಸ್ವಾಯತ್ತ ಕಾಲೇಜಿನ ಡಾ.ಮಹಾಲಿಂಗು ಬೆ.10.45 ಕ್ಕೆ ‘ಉತ್ಪಾದನಾ ಕ್ಷೇತ್ರದಲ್ಲಿ ಜಿಎಸ್ ಟಿ ಪರಿಣಾಮ’ ಎಂಬ ವಿಷಯ ಕುರಿತು ಮಂಡನೆ ಮಾಡಲಿದ್ದಾರೆ. ಮೈಸೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ‘ಸೇವಾ ವಲಯದಲ್ಲಿ  ಜಿಎಸ್ ಟಿ ಪರಿಣಾಮ’ ವಿಷಯ ಕುರಿತು ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 2 ರಿಂದ 3.30 ರವರೆಗೆ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾದ ಕೆ.ಎಸ್. ಬಸವರಾಜ್ ತೆರಿಗೆ ಆದಾಯದಲ್ಲಿ ಜಿಎಸ್ ಟಿ ಪರಿಣಾಮ’ ವಿಷಯ ಕುರಿತು ಮಾತನಾಡಲಿದ್ದಾರೆ.

ವಿಚಾರ ಸಂಕಿರಣದ ಸಮಾರೋಪವು ಮ.3.30 ಕ್ಕೆ ನಡೆಯಲಿದ್ದು, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಡಿ.ಎಸ್.ಲೀಲಾವತಿ ಸಮಾರೋಪ ಭಾಷಣ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9481833104, 99591846451 ಗೆ ಸಂಪರ್ಕಿಸಬಹುದಾಗಿದೆ. (ವರದಿ; ಎಲ್.ಜಿ)

Leave a Reply

comments

Related Articles

error: