ಸುದ್ದಿ ಸಂಕ್ಷಿಪ್ತ

ಸೆ.13. ಮಲೆ ಮಹದೇಶ್ವರ ಸ್ವಾಮಿ ಜಯಂತಿ

ಮೈಸೂರು,ಸೆ.12 : ಕೆ.ಆರ್.ಮೊಹಲ್ಲಾದ ಮಲೆ ಮಹದೇಶ್ವರ ದೇವಸ್ಥಾನದಿಂದ ಸೆ.13ರಂದು ಮಲೆ ಮಹದೇಶ್ವರಸ್ವಾಮಿ ಜಯಂತಿ ನಡೆಯುವುದು.

ಕುದೇರು ಮಠದ ಶ್ರೀಗುರುಶಾಂತಸ್ವಾಮಿಜೀ, ದಂಡಿಕೆರೆ ಶ್ರೀಮಠದ ಶ್ರೀ ಬಸವಲಿಂಗಸ್ವಾಮಿ, ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಚಂದ್ರಶೇಖರ ಸ್ವಾಮಿಜೀ ಸಾನಿಧ್ಯದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಸ್ವಾಮಿಗೆ ಸಂಕಲ್ಪ ಅಭಿಷೇಕ, ರುದ್ರಾಭಿಷೇಕ, ಪೂಜೆ ನೆರವೇರಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: