ಸುದ್ದಿ ಸಂಕ್ಷಿಪ್ತ

ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘ : ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ಸೆ.14ಕ್ಕೆ

ಮೈಸೂರು,ಸೆ.12 : ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ 5 ವರ್ಷಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯು ಸೆ.14 ಮಧ್ಯಾಹ್ನ 3 ಗಂಟೆಗೆ ಸಂಘದ ಕಚೇರಿಯಲ್ಲಿ ನಡೆಯುವುದು.

ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆಯಲ್ಲಿ 17 ಮಂದಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನಿರ್ದೇಶಕರಾಗಿ ಕೆಂಪೇಗೌಡ, ಹನಗೂಡು ನಟರಾಜು, ಕೆ.ದೀಪಕ್, ಕೆ.ಆರ್.ಶ್ರೀನಿವಾಸ್, ಎಸ್.ಸದಾಶಿವಪ್ಪ, ಮೊಹಮದ್ ನಯಿಮುಲ್ಲಾ, ವೈರಮುಡಿ, ಪ್ರಗತಿ ಗೋಪಾಲಕೃಷ್ಣ, ಸೋಮಶೇಖರ್, ಮುಕುಂದ, ಎಂ.ಮಹೇಶ್, ಎಂ.ನಾರಾಯಣ, ಎನ್.ಸುರೇಶ್, ಎಂ.ಎನ್.ಕಿರಣ್, ಎಸ್.ಮಂಜುನಾತ್, ಜ್ಯೋತಿ ಜಯಸೇನಾ ಕುಮಾರ್ ಹಾಗೂ ಶಿಲ್ಪಿಶ್ರೀ ಕೆ.ಎನ್. ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಸಿ.ಪುಟ್ಟರಾಜು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: