
ಮೈಸೂರು, ಸೆ.12 : ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಅಂಚೆ ಸೇವೆ ಸುಧಾರಣೆಗಾಗಿ ಸಲಹೆ ಸ್ವಾಗತಿಸಲು ಸೆ.18 ರಂದು ಬೆಳಿಗ್ಗೆ 11 ಗಂಟೆಗೆ ಯಾದವಗಿರಿ ಅಂಚೆ ಕಛೇರಿಯ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ “ಡಾಕ್ ಅದಾಲತ್” ಆಯೋಜಿಸಿದೆ. ಗ್ರಾಹಕರು ದೂರು ಮತ್ತು ಕುಂದುಕೊರತೆ ಬಗ್ಗೆ ಲಿಖಿತವಾಗಿ ಪತ್ರವನ್ನು ಸೆ.15 ರೊಳಗೆ ಯಾದವಗಿರಿಯಲ್ಲಿರುವ ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯಕ್ಕೆ ಸಲ್ಲಿಸಬೇಕು.
(ಎನ್.ಬಿ)