ಮೈಸೂರು

ನಾಡ ಕುಸ್ತಿಗೆ ಜೋಡಿ ಕಟ್ಟುವ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು ಸೆ.12:-ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುವ ದಸರಾ ಕುಸ್ತಿ ಪಂದ್ಯಾವಳಿಯ ನಾಡ ಕುಸ್ತಿಗೆ ಜೋಡಿ ಕಟ್ಟುವ ಕಾರ್ಯಕ್ರಮ ನಡೆಯಿತು.

ಮಂಗಳವಾರ ನಗರದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿರುವ ಕಾರಂತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಚಾಲನೆ ನೀಡಿದರು. ಬಳಿಕ  ಮಾತನಾಡಿದ ಅವರು ಕುಸ್ತಿ ಶಿಕ್ಷಣದ ಜೊತೆಜೊತೆಗೆ ಇರಬೇಕು. ಶಿಕ್ಷಣ ಇಲ್ಲದೆಹೋದರೆ ನೀವು ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಬರಿ ಕುಸ್ತಿ ಪಟು ಅಂತ ಮಾತ್ರ ಗುರುತಿಸಿಕೊಳ್ಳುತ್ತೀರ. ಆದರೆ ದೊಡ್ಡ ಕುಸ್ತಿಪಟುವಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ನಂತರ ವೇದಿಕೆಯ ಮೇಲಿದ್ದ ಅತಿಥಿಗಳು ಗದೆಯನ್ನು ತಿರುಗಿಸಿದರು. ಇದಾದ ನಂತರ ಜೋಡಿ ಕಟ್ಟಿದ ಕುಸ್ತಿ ಪಟುಗಳ ಬೆನ್ನು ತಟ್ಟಿದರು, ಹಾಗೂ ಕುಸ್ತಿ ಪಟುಗಳಿಗೆ ದಂಡ ಹೊಡೆಸಿದರು. ಬಳಿಕ ಕುಸ್ತಿ ಆರಂಭವಾಯಿತು. ಈ ಸಂದರ್ಭ ಎಸ್ಪಿ ರವಿ ಡಿ ಚೆನ್ನಣ್ಣ ನವರ್, ಹಾಗೂ ಪ್ರಾಧ್ಯಾಪಕರು ಹಾಗೂ ಹಿರಿಯ ಕುಸ್ತಿ ಪಟುವಾದ ರಂಗಣ್ಣ   ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: