ಮೈಸೂರು

ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ಉರ್ದು ಕವಿ ಸಮ್ಮೇಳನ

ಮೈಸೂರು,ಸೆ.12:- ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವ ಸಮಿತಿ ಉರ್ದು ಕವಿ ಸಮ್ಮೇಳನ ನಡೆಸಲು ಸಿದ್ದತೆ ನಡೆಸಿದೆ.

ಮಂಗಳವಾರ ಮುಷೈರ ಉಪಸಮಿತಿ ಜಿಲ್ಲಾ ವಕ್ಫ್ ಸಮಿತಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ, ಸೆ.27 ರಂದು ಗೋಲ್ಡನ್ ಪ್ಯಾಲೇಸ್ ಕನ್ವೆನ್ಶನ್ ಹಾಲ್‌ನಲ್ಲಿ ನಡೆಸಲು ಉದ್ದೇಶಿಸಲಾಯಿತು. ಸಮ್ಮೇಳನದ ಯಶಸ್ಸಿಗಾಗಿ ಉಪಸಮಿತಿಯು ಸ್ಥಳೀಯ ಪ್ರಮುಖರು ಮತ್ತು ಜಿಲ್ಲಾ ವಕ್ಫ್ ಸಮಿತಿಯ ಸಹಯೋಗದಲ್ಲಿ ಆಯೋಜಿಸಲು ಚಿಂತಿಸಲಾಗಿದೆ.

ಮುಷೀರ ಉರ್ದು ಸಾಹಿತ್ಯ ವಿಶೇಷವಾಗಿ ಘಜಲ್ ಮತ್ತು ಶಾಯಿರಿಗಳ ಗೋಷ್ಠಿಯಾಗಿದ್ದು ನಾಡಿನ ಪ್ರಮುಖ ಮತ್ತು ನೆರೆ ರಾಜ್ಯದ ಪ್ರಸಿದ್ದ ಕವಿಗಳನ್ನು ಕರೆಸಲು ಉದ್ದೇಶಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಶಿಕ್ಷಣ ಸಚಿವ ತನ್ವೀರ್ ಸೇಠ್ ಮತ್ತು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ಮುಖ್ಯ ಅಥಿತಿಗಳಾಗಿ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ ಎಂದು ಉಪಸಮಿತಿಯ ಕಾರ್ಯಧ್ಯಕ್ಷ ಪ್ರೊ. ಮಹಾಜಬಿನ್  ತಿಳಿಸಿದರು.

ಸಭೆಯಲ್ಲಿ ಉಪಸಮಿತಿ ಉಪವಿಶೇಷಾಧಿಕಾರಿ ಪುಟ್ಟರಾಜು, ಕಾರ್ಯದರ್ಶಿ ಅಬ್ದುಲ್ ಖಲೀಲ್ ಹಾಗೂ ವಕ್ಫ್ ಮಂಡಳಿಯ ಅಧ್ಯಕ್ಷ ರಾದ ಆರೀಫ್ ಎ. ಮೆಹಕರಿ  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: