ಮೈಸೂರು

ನಿಷ್ಕಲ್ಮಶ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ: ಉದ್ಯಮಿ ನಾಗರಾಜ್

ಬೈಲಕುಪ್ಪೆ: ನಿಷ್ಕಲ್ಮಶ ಶ್ರಮದಿಂದ ಮಾತ್ರ ಯಶಸ್ಸು ಸಾಧಿಸಬಹುದು ಎಂದು ಎಂದು ಉದ್ಯಮಿ ಡಾ. ಎಂ.ಬಿ. ನಾಗರಾಜ್ ಹೇಳಿದರು.

ಪಟ್ಟಣದ ರೋಟರಿ ಮಿಡ್ ಟೌನ್ ಹಾಗೂ ತಾಲೂಕು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣವೇ ನನ್ನ ಸಾಧನೆಗೆ ಅಡಿಪಾಯ. ಹುಟ್ಟೂರಿನಲ್ಲಿ ನನಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ. ಸೇವಾ ಮನೋಭಾವದಿಂದ ಕಾರ್ಯಪ್ರವೃತ್ತರಾಗುವ ವ್ಯಕ್ತಿಗಳನ್ನು ಜನ ಹಾಗೂ ಸಮಾಜ ತಾನಾಗಿಯೆ ಗುರುತಿಸುತ್ತದೆ. ಎಂದಿಗೂ ಮಾಡುವ ಕೆಲಸವನ್ನು ಹೇಳಿಕೊಂಡು ತಿರುಗಬಾರದು. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಸಂಘ ಸಂಸ್ಥೆಗಳು ಮುಂದುವರೆದು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದರು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ಥಾಣದಲ್ಲಿ ಕೆಟ್ಟು ನಿಂತಿರುವ ಕುಡಿಯುವ ನೀರಿನ ಸೌಕರ್ಯವನ್ನು ಸರಿಪಡಿಸಿಕೊಡುವ ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಗೊರಳ್ಳಿ ಜಗದೀಶ್, ಇಂದಿನ ದಿನಗಳಲ್ಲಿ ದಾನಿಗಳು ಸಿಗುವುದೇ ಕಷ್ಟವಾಗುತ್ತಿದೆ. ಅಂತಹರದಲ್ಲಿ ತಾವು ಹುಟ್ಟಿಬೆಳೆದ ತಾಲೂಕಿನ ಬಗ್ಗೆ ಅಪಾರ ಖಾಳಜಿಯುಳ್ಳ ವ್ಯಕ್ತಿಯಾದ ತಾಲೂಕಿನ ಮಂಚದೇವನಹಳ್ಳಿ ಗ್ರಾಮದ ನಾಗರಾಜ್ ಅವರು ಬೆಂಗಳೂರಿನಲ್ಲಿ ಕಂಟ್ರಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ಎಲೆ ಮರೆಯ ಕಾಯಂತೆ ತೊಡಗಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅಮೆರಿಕದ ಗ್ಲೋಬಲ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದು ತಾಲೂಕಿನ ಜನ ಹೆಮ್ಮೆಪಡುವ ವಿಚಾರವಾಗಿದೆ ಎಂದರು.

ಪಿರಿಯಾಪಟ್ಟಣ ತಾಲೂಕು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಕೀಲ ಬಿ.ವಿ. ಜವರೇಗೌಡ ಅವರು ಮಾತನಾಡಿ, ಇಂದಿನ ಕಾಲದಲ್ಲಿ ಹೆಸರಿಗಾಗಿ ಕೊಡುಗೆ ನೀಡುವವರಿದ್ದಾರೆ. ಆದರೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೇ ಉದಾರವಾಗಿ ಕೊಡುಗೆ ನೀಡುವ ಮೂಲಕ ನಾಗರಾಜ್ ಅವರು ಸೇವಾ ವಲಯದಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಸನ್ಮಾನಿಸುವುದು ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಎಂದರು.

ಕ್ರೀಡಾ ಮತ್ತು ಸಾಂಸ್ಕತಿಕ ಸಂಘದ ಕಾರ್ಯದರ್ಶಿ ಪಿ.ಎಂ. ವಿನೋದ್‌ಕುಮಾರ್, ರೋಟರಿ ವಲಯ ಸೇನಾನಿ ಸಿ.ಎನ್. ವಿಜಯ್ ಮಾತನಾಡಿದರು. ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್, ಡಾ. ಪ್ರಕಾಶ್‌ಬಾಬುರಾವ್, ಕೆ.ಕೆ. ಮಾಧು, ವಿನಯಶೇಖರ್ ಪಿ.ಎನ್. ನಾಗರಾಜ್, ಪಿ.ಎಂ. ವಿನೋದ್‌ಕುಮಾರ್, ವಾಣಿ, ಚೈತ್ರ, ವಾಣಿ ಇದ್ದರು. ಬೈಲಕುಪ್ಪೆ ಗ್ರಾ.ಪಂ. ಮಾಜಿ ಸದಸ್ಯರಾದ ಎಂ.ಬಿ. ಮಂಜುನಾಥ್ ಹಾಜರಿದ್ದರು.

Leave a Reply

comments

Related Articles

error: