ದೇಶಪ್ರಮುಖ ಸುದ್ದಿವಿದೇಶ

“ದಲೈಲಾಮ ನಮ್ಮ ಅತಿಥಿ, ದೇಶದ ಎಲ್ಲ ಪ್ರದೇಶಕ್ಕೂ ಭೇಟಿ ಕೊಡ್ತಾರೆ”: ಚೀನಾಗೆ ಭಾರತ ತಿರುಗೇಟು

ನವದೆಹಲಿ: ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಅರುಣಾಚಲ ಪ್ರದೇಶ ಭೇಟಿಗೆ ಆಕ್ಷೇಪವೆತ್ತಿರುವ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಅವರು, “ದಲೈ ಲಾಮಾ ಅವರು ಭಾರತದ ಅತಿಥಿ. ಅವರು ಭಾರತದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಲು ನಾವು ಅವಕಾಶ ನೀಡಿದ್ದೇವೆ. ಅವರು ಈ ಹಿಂದೆಯೂ ಅರುಣಾಚಲಕ್ಕೆ ಭೇಟಿ ನೀಡಿದ್ದಾರೆ. ಲಾಮ ಅವರು ಅಲ್ಲಿ ಸಾಕಷ್ಟು ಸಂಖ್ಯೆಯ ಬೌದ್ಧರಿಗೆ ಅಚ್ಚುಮೆಚ್ಚು. ಇದರಲ್ಲಿ ಹೊಸದೇನೂ ಇಲ್ಲ” ಎಂದಿದ್ದಾರೆ. ಈ ಮೂಲಕ ಚೀನಾಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.

ಅರುಣಾಚಲ ಪ್ರದೇಶದ ತವಾಂಗ್ ಪಟ್ಟಣದಲ್ಲಿ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಬೌದ್ಧರ ಧಾರ್ಮಿಕ ಸಮಾವೇಶಕ್ಕೆ ಆಗಮಿಸುವಂತೆ ಅಲ್ಲಿನ ಮುಖ್ಯಮಂತ್ರಿ ಪೆಮಾ ಖಂಡು ಅವರು ದಲೈಲಾಮಾ ಅವರಿಗೆ ಇತ್ತೀಚೆಗೆ ಆಹ್ವಾನವಿತ್ತಿದ್ದರು. ಇದಕ್ಕೆ ಸ್ಪಂದಿಸಿದ ದಲೈಲಾಮಾ ಅವರು ಆಹ್ವಾನ ಒಪ್ಪಿ ಅಲ್ಲಿಗೆ ತೆರಳಲು ನಿರ್ಧರಿಸಿದ್ದಾರೆ. ಆದರೆ ಅವರ  ತವಾಂಗ್ ಭೇಟಿಗೆ ಅವಕಾಶ ನೀಡಬಾರದು ಎಂದು ಚೀನಾ ತಗಾದೆ ತೆಗೆದಿದೆ. ಇತ್ತೀಚೆಗೆ ಭಾರತಕ್ಕೆ ಅಮೆರಿಕ ರಾಯಭಾರಿಯಾಗಿರುವ ರಿಚರ್ಡ್ ವರ್ಮಾ ಅವರ ತವಾಂಗ್ ಭೇಟಿಗೂ ತಕರಾರು ತೆಗೆದಿದ್ದು ಚೀನಾ, ಗಡಿ ವಿವಾದದಲ್ಲಿ ಭಾರತವನ್ನು ಅಮೆರಿಕ ತನ್ನ ವಿರುದ್ಧ ಎತ್ತಿಕಟ್ಟುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

Leave a Reply

comments

Related Articles

error: