ಕರ್ನಾಟಕಪ್ರಮುಖ ಸುದ್ದಿ

ಮೂಲಭೂತವಾದಿ ಮುಸ್ಲಿಮರಿಗೆ ರಾಜ್ಯ ಸರ್ಕಾರ ಬೆಂಬಲಿಸುತ್ತಿದೆ : ಮುರುಳೀಧರ ರಾವ್ ಆರೋಪ

ಬೆಂಗಳೂರು, ಸೆ.13 : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಮೂಲಭೂತವಾದಿಗಳಿಗೆ ಬೆಂಬಲ ನೀಡುವ ಮೂಲಕ ಮುಸ್ಲಿಂ ಸಮುದಾಯದ ಮತ ಪಡೆಯಲು ಯತ್ನಿಸುತ್ತಿದೆ ಎಂದು ಬಿಜೆಪಿಯ ಕರ್ನಾಟಕ ಉಸ್ತುವಾರಿ ಮುರಳೀಧರ ರಾವ್ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರವು ಮುಸ್ಲಿಂ ಮೂಲಭೂತವಾದಿಗಳ ಪರ ಮೃಧು ದೋರಣೆ ಅನುಸರಿಸುತ್ತಿದೆ. ಸರ್ಕಾರದ ಮೃದು ಧೋರಣೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ಜಿಹಾದ್ ಸಮರಕ್ಕೆ ರಾಜ್ಯದ ಯುವಕರು ನೇಮಕವಾಗುತ್ತಿದ್ದಾರೆ. ಸರ್ಕಾರದ ಅಜಾಗರೂಕತೆಯಿಂದ ದೇಶದ ಭದ್ರತೆಗೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾವ್ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‍ ಪಕ್ಷವು ವಿಭಜನೆ ರಾಜಕೀಯ ಮಾಡುತ್ತಿದೆ. ಇಂಥಹ ಸಂಚಿಗೆ ಬಿಜೆಪಿ ಕೂಡ ಬಲಿಯಾಗಿದೆ. ವಿಭಜನೆ ರಾಜಕೀಯದ ಬಿಜೆಪಿ ವಿರುದ್ಧ ಸತತ ಹೋರಾಟ ನಡೆಸುತ್ತದೆ ಎಂದು ಅವರು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.

ಹತ್ಯೆಗಳನ್ನು ಬೆಂಬಲಿಸುವುದಿಲ್ಲ :

ವಿಚಾರವಾದಿಗಳ ಹತ್ಯೆಯನ್ನು ತೀವ್ರವಾಗಿ ಬಿಜೆಪಿ ಖಂಡಿಸುತ್ತದೆ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್ ಮತ್ತು ಎಂಎಂ ಕಲ್ಬುರ್ಗಿ ಅವರ ಹತ್ಯೆಗಳಿಗೆ ಬಿಜೆಪಿ ಬೆಂಬಲವಿಲ್ಲ ಎಂದು ಹೇಳಿದ ರಾವ್, ಇಂತಹ ಹತ್ಯೆಗಳನ್ನು ತಡೆಯಲು ಸರ್ಕಾರ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

(ಎನ್.ಬಿ)

Leave a Reply

comments

Related Articles

error: