ಮೈಸೂರು

ಹೆಚ್ಚಿನ ಶಬ್ದದ ಪಟಾಕಿ ಸಿಡಿಸದಂತೆ ನಗರಾಯುಕ್ತರ ಸೂಚನೆ

ಅಕ್ಟೋಬರ್ 29ರಿಂದ 31ರವರೆಗೆ ದೀಪಾವಳಿ ಹಬ್ಬ ನಡೆಯಲಿದ್ದು, ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದರು.

ಸಾರ್ವಜನಿಕರು 125ಡೆಸಿಬಲ್(ಎ-1) ಅಥವಾ 145ಡೆಸಿಬಲ್(ಸಿ)ಗಿಂತ ಹೆಚ್ಚಿನ ಶಬ್ದವನ್ನು ಉಂಟು ಮಾಡುವ ಪಟಾಕಿಗಳನ್ನು ತಯಾರಿಸುವುದು, ಶೇಖರಿಸುವುದು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಬಾಣ ಬಿರುಸುಗಳನ್ನು ಹಚ್ಚುವಾಗ ಚಿಕ್ಕಮಕ್ಕಳ ಬಗ್ಗೆ ನಿಗಾ ಇಡಬೇಕಿದೆ. ಅಷ್ಟೇ ಅಲ್ಲದೇ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಲೈಸನ್ಸ್ ಹೊಂದಿದ ವಿಶ್ವಾಸಾರ್ಹ ಮಾರಾಟಗಾರರಿಂದ ಮಾತ್ರ ಪಟಾಕಿಗಳನ್ನು ಖರೀದಿಸುವುದು, ಪಟಾಕಿ ಉಪಯೋಗಿಸುವಾಗ ಯಾವಾಗಲೂ ದೊಡ್ಡವರ ಸಮ್ಮುಖದಲ್ಲಿ ಬಳಸುವುದು, ಪಟಾಕಿಗಳನ್ನು ಸುಡುವ ಮುನ್ನ ಅದರ ಹೊದಿಕೆಯ ಮೇಲೆ ನಮೂದಿಸಿರುವ ಎಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

 

Leave a Reply

comments

Related Articles

error: