ಸುದ್ದಿ ಸಂಕ್ಷಿಪ್ತ

ವಚನ ಸಂಪುಟ ಮಾರಾಟ

ಚಾಮರಾಜನಗರ, ಸೆ. 12:- ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯವಾಗಿರುವ ವಚನಗಳು ನಮ್ಮ ಪರಂಪರೆಯ ಅಪೂರ್ವ ಆಸ್ತಿ ಎನಿಸಿದೆ. ಪ್ರಸ್ತುತ ಕನ್ನಡ ಸಾಹಿತ್ಯ ಲೋಕದಲ್ಲಿ ಹತ್ತಾರು ವಚನಕಾರರ ಸಾವಿರಾರು ವಚನಗಳು ಲಭ್ಯವಿದೆ. ಇಂತಹ ವಚನಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹವುಗಳಾಗಿದ್ದು ಸಮಾಜಕ್ಕೆ ಅತ್ಯಂತ ಪ್ರಸ್ತುತ ಸಾಹಿತ್ಯವಾಗಿದೆ.

ಇಂತಹ ಸಾವಿರಾರು ವಚನಗಳನ್ನು ಒಟ್ಟುಗೂಡಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಬಸವಯುಗದ ವಚನ ಮಹಾಸಂಪುಟ-1952 ಪುಟಗಳು ಹಾಗೂ ಬಸವೋತ್ತರ ಯುಗದ ವಚನ ಮಹಾಸಂಪುಟ-1536 ಪುಟಗಳನ್ನು ಹೊಂದಿದಂತೆ 3ನೆಯ ಮುದ್ರಣವಾಗಿ ಎರಡು ಮಹಾಸಂಪುಟಗಳನ್ನು ಮುದ್ರಣ ಮಾಡಿಸಿ ಬಿಡುಗಡೆ ಮಾಡಿದೆ.

ಸದರಿ ಎರಡು ಸಂಪುಟಗಳ ಒಟ್ಟಾರೆ ಖರೀದಿ ಮೌಲ್ಯ 600 ರೂ.ಗಳು. ಈ ಸಂಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: