ಮೈಸೂರು

ಕರಾಮುವಿ ಮಾನ್ಯತೆ ನವೀಕರಣ ವಿಚಾರ: ಅಧಿಕಾರಿಗಳಿಂದ ಶೈಕ್ಷಣಿಕ ಸಭೆ

ಮೈಸೂರು,ಸೆ.13-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀಕರಣ ವಿಚಾರವಾಗಿ ಬುಧವಾರ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳು ಶೈಕ್ಷಣಿಕ ಸಭೆ ನಡೆಸಿದರು. ಕುಲಪತಿ, ಕುಲಸಚಿವರು, ಎಲ್ಲಾ ವಿಭಾಗದ ಎಚ್ ಓ‌ಡಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕುಲಪತಿ ಪ್ರೊ.ಶಿವಲಿಂಗಯ್ಯ ಅವರು ಅಧಿಕಾರಿಗಳೊಂದಿಗೆ ಬೆಳಿಗ್ಗೆಯಿಂದ ಮೂರು ಸಭೆ ನಡೆಸಿದರು. ಮುಂದಿನ ಸಾಲಿಗಾದರೂ ಕರಾಮುವಿಗೆ ಯುಜಿಸಿ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ. ಯುಜಿಸಿ ಹೊಸ ನಿಯಮಾವಳಿ ಪ್ರಕಾರ ಸಿದ್ಧರಾಗಿ. ಹೊಸ ಪಠ್ಯಕ್ರಮ, ನೂತನ ನಿಯಮಗಳನ್ನು ಜಾರಿಗೆ ತನ್ನಿ ಎಂದು ಸೂಚನೆ ನೀಡಿದರು. ಈ ಬಗ್ಗೆ ಕುಲಸಚಿವ ಡಾ.ಚಂದ್ರಶೇಖರ್ ಅವರಿಂದ ಎಲ್ಲರಿಗೂ ಮಾಹಿತಿ ರವಾನಿಸಲಾಗಿದೆ.

ಯುಜಿಸಿ ನಿಯಮಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸರಿಯಾಗಿ ಪಾಲಿಸಿಲ್ಲ. ನಿಯಮ ಮೀರಿ ವಿಶ್ವವಿದ್ಯಾನಿಯಲದಲ್ಲಿ ತಾಂತ್ರಿಕ ಕೋರ್ಸ್ ಗಳನ್ನು ಪ್ರಾರಂಭಿಸಿತ್ತು. ಇದರಿಂದ ಯುಜಿಸಿ ಕರಾಮುವಿಯ ಮಾನ್ಯತೆಯನ್ನು ರದ್ದುಗೊಳಿಸಿತ್ತು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಇತ್ತ ಕರಾಮುವಿ ಮಾನ್ಯತೆಗಾಗಿ ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಇದುವರೆಗೂ ಕರಾಮುವಿಗೆ ಯುಜಿಸಿ ಮಾನ್ಯತೆ ಸಿಕ್ಕಿಲ್ಲ. (ವರದಿ-ಎಸ್.ಎನ್, ಕೆ.ಎಸ್, ಎಂ.ಎನ್)

 

Leave a Reply

comments

Related Articles

error: